ಕಾಸರಗೊಡು: ಹೊಸ ವರ್ಷದ ಅಂಗವಾಗಿ ನಕಲಿ ಮಧ್ಯ ಉತ್ಪಾದನೆ, ವಿತರಣೆ, ಮಾದಕ ವಸ್ತುಗಳ ಕಳ್ಳ ಸಾಗಣಿಕೆ, ಮಾದಕ ವಸ್ತುಗಳ ಉಪಯೋಗ ಹಾಗೂ ವಿತರಣೆ, ಅಕ್ರಮ ಮಧ್ಯ ಸಾಗಾಟ ತಡೆಗಟ್ಟಲು ಅಬಕಾರಿ ಇಲಾಖೆಯು ತಪಾಸಣೆ ಚುರುಕುಗೊಳಿಸಿದೆ.
ಈ ಕುರಿತು ಚರ್ಚಿಸಲು ಜಿಲ್ಲಾ ಮಟ್ಟದ ಜನಪರ ಸಮಿತಿ ಸಭೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಕೆ.ನವೀನ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಅಬಕಾರಿ ಇಲಾಖೆಯ ಸಹಾಯಕ ಆಯುಕ್ತ ಪಿ.ಕೆ.ಜಯರಾಜ್ ವರದಿ ಮಂಡಿಸಿದರು. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆ ಸಮಯವನ್ನು ಸ್ಪೆಷಲ್ ಎನ್ಫೋರ್ಸ್‍ಮೆಂಟ್ ಅವಧಿಯಾಗಿ ಘೋಷಿಸಿ ಅಬಕಾರಿ ಇಲಾಖೆಯು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಮಡಿದೆ.
ಕಾಸರಗೋಡು ಡಿವಿಷನ್ ಆಫೀಸ್ ನಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ಅನ್ನು ತೆರೆಯಲಾಗಿದೆ. ಕಾಸರಗೋಡು, ಹೊಸದುರ್ಗ ಅಬಕಾರಿ ಸರ್ಕಲ್ ಆಫೀಸ್‍ನಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ಎರಡು ಸ್ಟ್ರೈಕಿಂಗ್ ಫೆÇೀರ್ಸ್ ರಚಿಸಲಾಗಿದೆ. ಜಿಲ್ಲೆಯ ಗಡಿ ಪ್ರದೇಶದಲ್ಲಿ ವಿಶೇಷ ಪೆಟ್ರೋಲಿಂಗಿಗಾಗಿ ಬಾರ್ಡರ್ ಪೆಟ್ರೋಲ್ ಯೂನಿಟ್ ಮತ್ತು ಕೆಮು ( ಕೇರಳ ಎಕ್ಸೈಸ್ ಮೊಬೈಲ್ ಇಂಟರ್ವೇಷನ್ ಯೂನಿಟ್) ಸಹ ಸಕ್ರಿಯವಾಗಿದೆ. ಅಬಕಾರಿಯು ಮಾದಕ ವಸ್ತುಗಳ ದಂಧೆಯಲ್ಲಿ ತೊಡಗಿರುವ ಜಿಲ್ಲೆಯ ಕ್ರಿಮಿನಲ್‍ಗಳ ಮಾಹಿತಿಯನ್ನು ಸಂಗ್ರಹಿಸಿ ನಿಗಾ ವಹಿಸುತ್ತಿದೆ. ಮದ್ಯ, ಮಾದಕ ವಸ್ತುಗಳ ಕಳ್ಳ ಸಾಗಾಟ ತಡೆಯಲು ಜಿಲ್ಲೆಯಾದ್ಯಂತ ವಾಹನ ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಸಹಾಯಕ ಆಯುಕ್ತ ಪಿ.ಕೆ.ಜಯರಾಜ್ ತಿಳಿಸಿದ್ದಾರೆ.