HEALTH TIPS

ನಾಚಿಕೆಬೇಡ: ನಾಚಿಕೆಮುಳ್ಳಿನ ಅನೇಕ ಪ್ರಯೋಜನಗಳ ಬಗೆಗೂ ಗೊತ್ತಿರಲಿ

                   ಮನೆಯಂಗಳ ಸಹಿತ ಹಿತ್ತಲು, ತೋಟಗಳಲ್ಲಿ ಕಂಡುಬರುವ ನಾಚಿಕೆಮುಳ್ಳು ನಮಗೆಲ್ಲ ಪರಿಚಿತ. ನಾವೆಲ್ಲರೂ ಬಹುಶಃ ಅದನ್ನು ಸ್ಪರ್ಶಿಸಿ ಕೌತುಕ ವೀಕ್ಷಿಸಿದ ಬಾಲ್ಯ ನೆನಪಿರಬಹುದು. 

              ಅವುಗಳು ಸ್ಪರ್ಶಕ್ಕೆ ಮುದುಡುವ ಎಲೆಗಳನ್ನು ಹೊಂದಿರುತ್ತವೆ ಮತ್ತು ನಂತರ ತಮ್ಮ ಮೂಲ ಸ್ಥಿತಿಗೆ ಮರಳುತ್ತವೆ. ಸ್ಪರ್ಶಿಸಿದಾಗ ಅವು ಮುದುಡುತ್ತಿವೆಯಾದರೂ, ಬಳಿಕ ಅರಳುವ ಈ ಮುಳ್ಳುಗಿಡ ರಗಳೆ ಎಂದೆನಿಸದರೂ  ಇದರ ಅನುಕೂಲಗಳು ಹಲವು. 

ಮಧುಮೇಹವನ್ನು ಕಡಿಮೆ ಮಾಡಲು

          ನಾಚಿಕೆಮುಳ್ಳಿನ ಎಲೆ, ಹೂವು, ಬೇರುಗಳು ಔಷಧೀಯ ಗುಣಗಳಿಂದ ಕೂಡಿದೆ. ಇದರ ಬೇರನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ಮಧುಮೇಹವನ್ನು ಕಡಿಮೆ ಮಾಡಲು ಸಹಕಾರಿ.

ಚರ್ಮ ರೋಗಗಳನ್ನು ತಡೆಗಟ್ಟಲು

          ನಾಚಿಕೆಮುಳ್ಳಿನ ಎಲೆಗಳು ಚರ್ಮ ರೋಗಗಳನ್ನು ತಡೆಯಲು ಒಳ್ಳೆಯದು. ಇದರ ಎಲೆಗಳನ್ನು ನೀರನ್ನು ಸೇರಿಸದೆ ಪುಡಿಮಾಡಿ ಪೀಡಿತ ಚರ್ಮದ ಪ್ರದೇಶಗಳಿಗೆ ಅನ್ವಯಿಸಬಹುದು. ಚರ್ಮದ ಸುಕ್ಕುಗಳನ್ನು ಹೋಗಲಾಡಿಸಲು ಸಹ ಒಳ್ಳೆಯದು.

ವಾತ ರೋಗವನ್ನು ಕಡಿಮೆ ಮಾಡಲು ಮತ್ತು ಮೂತ್ರದ ಕಾಯಿಲೆಗಳನ್ನು ತಡೆಯಲು

         ಎಲೆಗಳನ್ನು ಜೇಡಿಮಣ್ಣಿನೊಂದಿಗೆ ಬೆರೆಸಿ ಲೇಪಿಸಿದರೆ ಸಂಧಿವಾತದಿಂದ ಉಂಟಾಗುವ ಉರಿಯೂತವನ್ನು ತಡೆಯುತ್ತದೆ. ಇದರ ಜೊತೆಗೆ ಎಲೆ ಮತ್ತು ಬೇರುಗಳನ್ನು ಸಮನಾಗಿ ತೆಗೆದುಕೊಂಡು ಒಣಗಿಸಿ ಪುಡಿಮಾಡಿ ಅರ್ಧ ಚಮಚ ಹಾಲು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಮೂತ್ರದ ಕಾಯಿಲೆಗಳು ಬರುವುದಿಲ್ಲ.

           ಗಮನಿಸಿ: ಅಧಿಕ ರಕ್ತದೊತ್ತಡ ಇರುವವರು ಮತ್ತು ರಕ್ತದಲ್ಲಿ ಕ್ರಿಯೇಟೈನ್ ಅಧಿಕವಾಗಿರುವವರು ನಾಚಿಕೆಮುಳ್ಳು ಬಳಸುವಾಗ ಜಾಗರೂಕರಾಗಿರಬೇಕು. ಇದರಿಂದ ತೀವ್ರ  ರೀತಿಯಲ್ಲಿ ರಕ್ತದೊತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಬಳಸುವ ಮೊದಲು ಆಯುರ್ವೇದ ವೈದ್ಯರ ಸಲಹೆಯನ್ನು ಪಡೆಯುವುದು ಕಡ್ಡಾಯವಾಗಿದೆ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries