ಮಂಜೇಶ್ವರ: ಆನೆಕಲ್ಲಿನ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಕೂಲಿಕಾರ್ಮಿಕ ಬಾಲಕೃಷ್ಣ ನಾಯ್ಕ(39)ಎಂಬವರ ಮೃತದೇಹ ವರ್ಕಾಡಿ ಆನೆಕಲ್ಲು ಹೊಳೆಯಲ್ಲಿ ಪತ್ತೆಯಾಗಿದೆ. ಶುಕ್ರವಾರ ಕೆಲಸ ಬಿಟ್ಟು ಮನೆಗೆ ಬಂದಿದ್ದ ಇವರು, ನಂತರ ಹೊರಗೆ ತೆರಳಿದವರು ನಾಪತ್ತೆಯಾಗಿದ್ದರು. ಹುಡುಕಾಟದ ಮಧ್ಯೆ ಮೃತದೇಹ ಪತ್ತೆಯಾಗಿದೆ. ಆಯತಪ್ಪಿ ಹೊಳೆಗೆ ಬಿದ್ದಿರಬೇಕೆಂದು ಸಂಶಯಿಸಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.