ಕಾಸರಗೋಡು: ಸಮಗ್ರ ಶಿಕ್ಷಾ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಆವಿಷ್ಕರಿಸಿದ "ಈ ಕಾಲಘಟ್ಟದೊಂದಿಗೆ" ಹೆಸರಿನ ಪ್ರತಿಭೋತ್ಸವ ಕಾರ್ಯಕ್ರಮ ದೇಲಂಪಾಡಿ ಗ್ರಾಮ ಪಂಚಾಯತಿನ ಎಡಪರಂಬ ಕಿರಿಯ ಪ್ರಾಥಮಿಕ ಶಾಲೆಯ ಪ್ರಾದೇಶಿಕ ಪ್ರತಿಭಾ ಕೇಂದ್ರದಲ್ಲಿ ಜರುಗಿತು.
ಕುಂಬಳ ಬಿ ಆರ್ ಸಿ ಯ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಪ್ರತಿಭೋತ್ಸವ ನಡೆಸಲಾಯಿತು. ಮಕ್ಕಳಿಗೂ ರಕ್ಷಕರಿಗೂ ವಿವಿಧ ಕಲಾ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸ್ಪರ್ಧಾ ವಿಜೇತರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ವಿಜಯಶಾಲಿಗಳನ್ನು ಬ್ಲಾಕ್ ಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಜೊತೆಗೆ ಪುಟಾಣಿ ಮಕ್ಕಳ ಸೃಜನಾತ್ಮಕ ಬರವಣಿಗೆಯನ್ನೊಳಗೊಂಡ ಹಸ್ತಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಶಾಲಾ ಪಿ ಟಿ ಎ ಅಧ್ಯಕ್ಷ ಜನಾರ್ದನ ವೈ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯ ರಾಧಾಕೃಷ್ಣನ್ ಸಿ. ಜಾನಪದ ಹಾಡು ಹಾಡುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಂಬಳೆ ಬಿಆರ್‍ಸಿ ಯ ಬ್ಲಾಕ್ ಪೆÇ್ರೀಜೆಕ್ಟ್ ಕೋ ಆರ್ಡಿನೇಟರಾದ ಜಯರಾಮ್ ಜೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಹಸ್ತಪತ್ರಿಕೆ ಬಿಡುಗಡೆಗೊಳಿಸಿದರು. ಮಾತೃ ಪಿಟಿಎ ಅಧ್ಯಕ್ಷೆ ಸುಮಲತಾ, ಎಸ್‍ಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಎಸ್‍ಡಿಸಿ ಅಧ್ಯಕ್ಷ ಗಂಗಾಧರ ಮಾಸ್ಟರ್, ಪಿಟಿಎ ಉಪಾಧ್ಯಕ್ಷ ರವಿ ಬೆಳ್ಳಚ್ಚೇರಿ ಉಪಸ್ಥಿತರಿದ್ದರು. ಶಾಲಾ ಹಿರಿಯ ಶಿಕ್ಷಕ ಚಂದ್ರಶೇಖರ್ ಎ ಎನ್ ಸ್ವಾಗತಿಸಿದರು. ಪ್ರಾದೇಶಿಕ ಪ್ರತಿಭಾಕೇಂದ್ರದ ಇ.ವಿ. ಸವಿತ ಸಿ ವಂದಿಸಿದರು. ಸಿಆರ್‍ಸಿಸಿ ಸಮಿತ ಟಿ, ಸಿಆರ್‍ಸಿಸಿ ಬಿಜೀಷ್ ಕೆ ನಾಯರ್, ಅಧ್ಯಾಪಕರು, ರಕ್ಷಕರು, ಮಕ್ಕಳು ಉಪಸ್ಥಿತರಿದ್ದರು. ಎಡಪರಂಬ ಜಿಎಲ್‍ಪಿಎಸ್ ಮುಖ್ಯ ಶಿಕ್ಷಕ ಬಿ ರಾಜೇಶ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.