ಕಾಸರಗೋಡು: ಪೆರ್ಲ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠೀ ಮಹೋತ್ಸವದ ಪಂಚಮಿ ಉತ್ಸವದ ಅಂಗವಾಗಿ ಭಾನುವಾರ ದೇಗುಲದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಸೇರಿದ್ದರು. ಶ್ರೀದೇವರ ಬಲಿ ಉತ್ಸವ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. 18ರಂದು ಷಷ್ಟಿ ಉತ್ಸವ ನಡೆಯುವುದು. 19ರಂದು ಶ್ರೀದೇವರ ಅವಭೃತಸ್ನಾನ, ರಾಜಾಂಗಣ ಪ್ರಸಾದ ನಡೆಯುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ 18ರಂದು ಸಂಜೆ 7ರಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿ ಮಾತೆಯರು ಮತ್ತು ಮಕ್ಕಳಿಂದ ಸಾಂಸ್ಕøತಿಕ ವೈವಿಧ್ಯ, ರಾತ್ರಿ 8.30ರಿಂದ ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಜಾರ್ ಬಳಗದವರಿಂದ 'ತೆಲಿಕೆದ ಗೊಂಚಿಲ್'ಹಾಸ್ಯ ಕಾರ್ಯಕ್ರಮ ನಡೆಯುವುದು.
ಕಾಸರಗೋಡಿನ ನಾನಾ ಸುಬ್ರಹ್ಮಣ್ಯ ದೇಗುಲಗಳಲ್ಲಿ ಷಷ್ಠೀ ಮಹೋತ್ಸವ ನಡೆಯುತ್ತಿದೆ. ಹದಿನೆಂಟು ಪೇಟೆ ದೇವಸ್ಥಾನ ಮಂಜೇಶ್ವರ ಶ್ರೀಮತ್‍ಅನಂತೇಶ್ವರ ದೇವಸ್ಥಾನ, ಬೇಳ ಕುಮಾರಮಂಗಲ ದೇವಸ್ಥಾನ, ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ತಲಕ್ಲಾಯಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಜಿಲ್ಲೆಯ ನಾನಾ ಕ್ಷೇತ್ರಗಳಲ್ಲಿ ಷಷ್ಟಿ ಮಹೋತ್ಸವ ಜರುಗಲಿದೆ.
: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಭಾನುವಾರ ಶ್ರೀದೇವರ ಬಲಿ ಉತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.