ಕೋಝಿಕ್ಕೋಡ್: ಸ್ಪೀಕರ್ ಎಎನ್ ಶಂಸೀರ್ ಹಠಾತ್ ಭಾಷಣ ನಿಲ್ಲಿಸಿ ತೆರಳಿದ ಘಟನೆ ನಡೆದಿದೆ. ಕೋಝಿಕ್ಕೋಡ್ ಜಿಲ್ಲಾ ಶಾಲಾ ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಸ್ಪೀಕರ್, ಶಿಕ್ಷಕರು ಪರಸ್ಪರ ಮಾತನಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ವೇದಿಕೆಯಿಂದ ನಿರ್ಗಮಿಸಿದರು. ಶಿಕ್ಷಕರನ್ನು ತರಾಟೆಗೆ ಪಡೆದ ಸ್ಪೀಕರ್, ಏಕಾಏಕಿ ಭಾಷಣ ಮುಗಿಸಿ ನಿರ್ಗಮಿಸಿದರು.
ಮಕ್ಕಳು ಅವರ ಭಾಷಣವನ್ನು ಗಮನವಿಟ್ಟು ಕೇಳುತ್ತಿದ್ದರು. ಆದರೆ ಶಿಕ್ಷಕರು ಮಾತನಾಡುತ್ತಿದ್ದರು. ಹಾಗಾಗಿ ತಾನಿನ್ನು ಮಾತನಾಡುವುದಿಲ್ಲ ಎಂದ ಸ್ಪೀಕರ್ ಮೈಕ್ ಮೂಲಕ ಶಿಕ್ಷಕರನ್ನು ತರಾಟೆಗೈದು ನಂತರ ಭಾಷಣವನ್ನು ಕೊನೆಗೊಳಿಸಿದರು.
ಸ್ಪೀಕರ್ ಮಾತನಾಡುವಾಗ ಶಿಕ್ಷಕರು ಮಾತನಾಡುತ್ತಿದ್ದಾರೆ. ಇದನ್ನು ನಾನು ಯಾರಿಗೆ ಹೇಳಲಿ? ಹಾಗಾಗಿ ಭಾಷಣವನ್ನು ಮೊಟಕುಗೊಳಿಸುವುದು ಉತ್ತಮ. ಬೇರೆ ಹೆಚ್ಚು ಇನ್ನೇನೋ ಆಗುವುದಕ್ಕಿಂತ ಅದೊಳ್ಳೆಯದು. ಮಕ್ಕಳು ನಿಜವಾಗಿಯೂ ಗಮನ ಹರಿಸುತ್ತಾರೆ. ಶಿಕ್ಷಕರಿಗೆ ಕಾಳಜಿ ಇಲ್ಲ. ಆದ್ದರಿಂದ ಕೋಝಿಕ್ಕೋಡ್ ರಾಜ್ಯ ಶಾಲಾ ಕಲಾ ಉತ್ಸವವನ್ನು ಉದ್ಘಾಟಿಸಲಾಗಿದೆ ಎಂದು ಘೋಷಿಸುವುದರೊಂದಿಗೆ ನಾನು ನಿಲ್ಲಿಸುತ್ತೇನೆ.'ಎಂದು ಎಎನ್ ಶಂಸೀರ್ ಹೇಳಿ ತೆರಳಿದರು.