HEALTH TIPS

ರಾಮಮಂದಿರ ಉದ್ಘಾಟನೆಗೆ ಆಮಂತ್ರಣ: ಕಾಂಗ್ರೆಸ್‌ ಸಂದಿಗ್ಧ

                ವದೆಹಲಿ: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವು 'ಇಂಡಿಯಾ' ಮೈತ್ರಿಕೂಟದಲ್ಲಿ ಗೊಂದಲ ಹಾಗೂ ಸಂದಿಗ್ಧ ಪರಿಸ್ಥಿತಿಯನ್ನುಂಟು ಮಾಡಿದೆ. ಕಾಂಗ್ರೆಸ್‌ ತನ್ನ ನಿರ್ಧಾರವನ್ನು ಇದುವರೆಗೂ ತಿಳಿಸದೇ ಇರುವುದೇ ಇದಕ್ಕೆ ಮುಖ್ಯ ಕಾರಣ. ಬಿಜೆಪಿಯ ಜಾಲದಲ್ಲಿ ಸಿಲುಕಿಕೊಳ್ಳದಂತೆ ಕಾಂಗ್ರೆಸ್‌ಗೆ ಮೈತ್ರಿಕೂಟದ ಇತರ ಪಕ್ಷಗಳು ಎಚ್ಚರಿಕೆಯನ್ನೂ ನೀಡಿವೆ.

              ತೃಣಮೂಲ ಕಾಂಗ್ರೆಸ್‌, ಮುಸ್ಲಿಂ ಲೀಗ್‌ ಹಾಗೂ ಸಿಪಿಎಂ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿವೆ. 'ಇಂಡಿಯಾ'ದ ಅಂಗ ಪಕ್ಷಗಳ ಈ ನಿರ್ಧಾರವು ಕಾಂಗ್ರೆಸ್‌ಗೆ ಹೆಚ್ಚಿನ ಸಂಕಷ್ಟವನ್ನು ತಂದೊಡ್ಡಿದೆ. ಕಾರ್ಯಕ್ರಮಕ್ಕೆ ಹೋಗುವುದು ಅಥವಾ ಹೋಗದಿರುವುದು ಕಾಂಗ್ರೆಸ್‌ಗೆ ಕಷ್ಟವಾಗಲಿದೆ. ಕೇರಳ ಕಾಂಗ್ರೆಸ್‌ನ ಹಿರಿಯ ನಾಯಕ, ಸಂಸದ ಕೆ.ಮುರಳೀಧರನ್‌ ಅವರು 'ಕಾರ್ಯಕ್ರಮದಲ್ಲಿ ಪಕ್ಷವು ಭಾಗವಹಿಸಬಾರದು' ಎಂದಿದ್ದಾರೆ.

                'ಕೆಲವರು ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಪಕ್ಷವು ಬಿಜೆಪಿ ಹೇಳಿದಂತೆ ಕೇಳಿತು ಎಂದು ಹೇಳುತ್ತಾರೆ. ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದರೆ, ಇವರು ಹಿಂದೂ ವಿರೋಧಿಗಳು ಎನ್ನುತ್ತಾರೆ. ಆದರೆ, ಇದು ಸರಿಯಲ್ಲ. ಕಾರ್ಯಕ್ರಮಕ್ಕೆ ಹೋಗದಿರುವುದು ಹಿಂದೂ ವಿರೋಧಿ ಆಗುವುದಿಲ್ಲ' ಎನ್ನುತ್ತಾರೆ ಸಂಸದ ಶಶಿ ತರೂರ್‌.

                 'ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು' ಎನ್ನುವುದು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್‌ ಅವರ ಅಭಿಪ್ರಾಯ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries