ನವದೆಹಲಿ: ತಂತ್ರಜ್ಞಾನದ ನೆರವಿನಿಂದ ಕಳೆದ ಒಂಬತ್ತರಿಂದ 10 ವರ್ಷಗಳಲ್ಲಿ ಭಾರತ ಸಾಧಿಸಿದ ಪ್ರಗತಿಯು ಇತರೆ ದೇಶಗಳಿಗೆ ಪೀಳಿಗೆಯೇ ಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ: ತಂತ್ರಜ್ಞಾನದ ನೆರವಿನಿಂದ ಕಳೆದ ಒಂಬತ್ತರಿಂದ 10 ವರ್ಷಗಳಲ್ಲಿ ಭಾರತ ಸಾಧಿಸಿದ ಪ್ರಗತಿಯು ಇತರೆ ದೇಶಗಳಿಗೆ ಪೀಳಿಗೆಯೇ ಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೊಬೈಲ್ ಹಾಗೂ ಸಮರ್ಪಕ ಇಂಟೆರ್‌ನೆಟ್ ಕನೆಕ್ಟಿವಿಟಿ ಮೂಲಕ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಶೃಂಗಸಭೆ 2023ಕ್ಕೆ (ಕೃತಕ ಬುದ್ಧಿಮತ್ತೆ) ಜಾಗತಿಕ ಪಾಲುದಾರಿಕೆಗೆ ಜನರನ್ನು ಆಹ್ವಾನಿಸುವ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಎಐ ತಂತ್ರಜ್ಞಾನದಲ್ಲಿ ಬೃಹತ್ ಹೆಜ್ಜೆ ಇಡಲು ಭಾರತ ಎದುರು ನೋಡುತ್ತಿದೆ ಎಂದು ಹೇಳಿದರು. ಆ ಮೂಲಕ ದೇಶದ ಜನರಿಗೆ ಅವರ ಪ್ರಾದೇಶಿಕ ಭಾಷೆ ಅಥವಾ ಶಿಕ್ಷಣ ಸರಳಗೊಳಿಸುವ ಕುರಿತು ತಿಳಿಸಿದರು.
ಸ್ಟಾರ್ಟ್‌ಅಪ್ ವ್ಯವಸ್ಥೆ ಹೊಂದಿರುವ ಅತಿ ಕಿರಿಯ ದೇಶಗಳಲ್ಲಿ ಭಾರತ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ಸುರಕ್ಷಿತ, ಕೈಗೆಟುಕುವ, ಸಮರ್ಥನೀಯ ಉಪಕ್ರಮ ಇದಾಗಿದೆ. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು ಈ ಪ್ರಯತ್ನಗಳಿಗೆ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಉತ್ಪದನಾ ವಲಯಗಳಲ್ಲಿ ಎಐ ತಂತ್ರಜ್ಞಾನದ ಸಮರ್ಪಕ ಬಳಕೆ ಕುರಿತಾಗಿಯೂ ಪ್ರಧಾನಿ ಮೋದಿ ಪ್ರತಿಪಾದಿಸಿದರು.
ಭಾರತವು ನಾವೀನ್ಯತೆಯನ್ನು ಅವಿಷ್ಕಾರ ಮಾಡಿದಾಗ, ಯಾರೂ ಕೂಡ ಹಿಂದೆ ಬೀಳದಂತೆ ಖಾತ್ರಿಪಡಿಸುತ್ತದೆ. ಮಾನವೀಯತೆ ಒಳಿತಿಗಾಗಿ ಎಐ ಬಳಕೆ ಮಹತ್ವದ ಕುರಿತು ಅವರು ಉಲ್ಲೇಖಿಸಿದ್ದಾರೆ.