ಬದಿಯಡ್ಕ: ಕಾರಡ್ಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ತಲ್ಪಣಾಜೆ ಶಾಸ್ತ್ರೀಯ ಸಂಗೀತ, ವಯಲಿನ್ ಪೌರಸ್ತ್ಯ, ಕನ್ನಡ ಕಂಠಪಾಠ ಸ್ಪರ್ಧೆ ಹಾಗೂ ಗಾನಲಾಪನಂನಲ್ಲಿ ಪ್ರಥಮ ಸ್ಥಾನ ಹಾಗೂ ಎ ಗ್ರೇಡ್ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅಷ್ಟಪದಿಯಲ್ಲಿ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನೂ ಪಡೆದಿದ್ದಾರೆ. ಈಕೆ ವಿದ್ಯಾಗಿರಿ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಶಿಕ್ಷಕ ಶಿವಶಂಕರ ಭಟ್ ತಲ್ಪನಾಜೆ ಮತ್ತು ಶಿಕ್ಷಕಿ ಸುಧಾವಾಣಿ ಅವರ ಪುತ್ರಿ. ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಅನೀಶ್ ವಿ ಭಟ್ ಪುತ್ತೂರು ಹಾಗೂ ವಿದುಷಿ ಗೀತಾ ಸಾರಡ್ಕ ಇವರ ಬಳಿ ಹಾಗೂ ವಯಲಿನ್‍ನನ್ನು ವಿದ್ವಾನ್ ಪ್ರಭಾಕರ ಕುಂಜಾರು ಅವರ ಬಳಿ ಕಲಿಯುತ್ತಿರುವಳು. ಬದಿಯಡ್ಕ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸದಸ್ಯೆಯಾಗಿದ್ದಾಳೆ.