ಕಾಸರಗೋಡು: ಪರಿವಾರ ಬಂಟ ಸಂಘ(ರಿ)ಮಂಗಳೂರು ವತಿಯಿಂದ ವಿಶ್ವ ಪರಿವಾರ ಬಂಟರ ಸಂಘದ ಸುವರ್ಣ ಮಹೋತ್ಸವ-2023'ಕಾರ್ಯಕ್ರಮ ಡಿ. 23ಹಾಗೂ 24ರಂದು ಕಾಸರಗೋಡು ಕುರುವೈಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಾರ್ಥನಾ ಮಂದಿರದಲ್ಲಿ ಜರುಗಲಿರುವುದು. ಅವಿಭಜಿತ ದ.ಕ ಜಿಲ್ಲೆಯ ಪುತ್ತೂರು, ಕಡಬ, ಕೊಕ್ಕಡ, ಮಂಗಳೂರು, ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜ್‍ಪೇಟೆ, ಕಾಸರಗೋಡು ಜಿಲ್ಲೆಯ ಕಾಸರಗೋಡು, ಮಂಜೇಶ್ವರ, ಅಡೂರು, ಕಾಞಂಗಾಡು ಹಾಗೂ ವಿದೇಶದಲ್ಲಿ ನೆಲೆಸಿರುವ ಸಮುದಾಯದವರು ಸಮಾವೇಶದಲ್ಲಿ ಪಾಲ್ಗೊಳ್ಳಲಿರುವುದಾಗಿ ಸಮಘಟನೆ ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ಡಾ. ಜಯಪ್ರಕಾಶ್ ನಾಯ್ಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
23ರಂದು ಬೆಳಗ್ಗೆ 7ಕ್ಕೆ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಈ ಸಂದರ್ಭ ಸ್ಮರಣಸಂಚಿಕೆಯ ಶೀರ್ಷಿಕೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡುವರು. ಬ್ರಹ್ಮಶ್ರೀ ವಿಷ್ಣುಪ್ರಕಾಶ್ ಪಟ್ಟೇರಿ ಕಾವುಮಠ ದಿವ್ಯ ಉಪಸ್ಥಿತಿರುವರುವರು. ಧಾರ್ಮಿಕ ಮುಂದಾಳು ಡಾ. ಕೆ.ಸಿ ನಾಯ್ಕ್ ಗ್ವರವಾಧ್ಯಕ್ಷರಾಗಿರುವರು. ಸಂಘಟನೆ ಕೇಂದ್ರ ಸಮಿತಿ ಅಧ್ಯಕ್ಷ ಎ. ಸಂತೋಷ್ ಕುಮಾರ್ ಕಾಯರ್‍ಮಜಲು ಅಧ್ಯಕ್ಷತೆ ವಹಿಸುವರು. ಸಮುದಾಯದ ವಿವಿಧ ತರವಾಡಿನ ಮುಖ್ಯಸ್ಥರಿಗೆ ಹಾಗೂ ವಿವಿಧ ವಲಯದಲ್ಲಿ ಸಾಧನೆ ತೋರಿದವರಿಗೆ ಗೌರವಾರ್ಪಣೆ, ವಿಚಾರಗೋಷ್ಟಿ, ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿರುವುದು.
24ರಂದು ಬೆಳಗ್ಗೆ 9.30ಕ್ಕೆ ವಿದ್ಯಾರ್ಥಿ, ಯುವ ಮತ್ತು ಮಹಿಳಾ ಸಮಾವೇಶ, ಕ್ಶಲ್ಯಾಭಿವೃದ್ಧಿ ತರಬೇತಿ, ಸಂಗೀತ ರಸಮಂಜರಿ ಕಾರ್ಯಕ್ರಮ, ಪರಿವಾರ ಬಂಟರ ಸಂಘದ ವಾರ್ಷಿಕ ಮಹಾಸಭೆ ನಡೆಯುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎ. ಸಂತೋಷ್ ಕುಮಾರ್, ಮನೋಹರ್ ನಾಯ್ಕ್, ಪುರುಷೋತ್ತಮ ನಾಯ್ಕ್ ಕೆ.ಸಿ.ಎನ್, ಯೋಗೀಶ್, ಕಿಶನ್ ಮೈ ಉಪಸ್ಥಿತರಿದ್ದರು.