ತಿರುವನಂತಪುರಂ: ಕೆಎಸ್‍ಆರ್‍ಟಿಸಿಯನ್ನು ಲಾಭದಾಯಕವಾಗಿಸಲು ಸಾಧ್ಯವಿಲ್ಲ ಎಂದಿರುವ ಮಾಜಿ ಸಾರಿಗೆ ಸಚಿವ ಆಂಟನಿ ರಾಜು, ನಷ್ಟವನ್ನೂ ಕಡಿಮೆ ಮಾಡಬೇಕು ಎಂದು ಹೇಳಿರುವÀರು.
ಎಲ್ಲ ಹೋರಾಟಗಳಿಗೆ ಮಣಿದರೆ ಕೆಎಸ್‍ಆರ್‍ಟಿಸಿ ಮತ್ತೆ ಉಳಿಯದು ಎಂದು ಆ್ಯಂಟನಿರಾಜು ಹೇಳಿದರು.
ಎಷ್ಟು ದಿನ ಸಚಿವರಾಗಿದ್ದೆ ಮತ್ತು ಏನು ಮಾಡಿದರು ಎಂಬುದμÉ್ಟೀ ಅಲ್ಲ, ವಿಸ್ಮಯ ಪ್ರಕರಣದಲ್ಲಿ ಶಂಕಿತ ಆರೋಪಿ ಕಿರಣ್ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಕ್ಕೆ ತನ್ನನ್ನು ಸಚಿವ ಸ್ಥಾನದಿಂದ ಹೊರಹಾಕಲಾಗಿದೆ ಎಂದರು.
ಕೆಎಸ್‍ಆರ್‍ಟಿಸಿ ನಿರ್ವಹಣೆಯಲ್ಲಿ ವೃತ್ತಿಪರರನ್ನು ಕರೆತರಲಾಗಿದೆ.ಕೆಎಸ್ ಆರ್ ಟಿಸಿ ಸ್ವಿಪ್ಟ್ ಅನ್ನು ತಂದು ವೇತನ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ.
ಸಿಂಗಲ್ ಡ್ಯೂಟಿ ಪದ್ಧತಿಯನ್ನು ಪರಿಚಯಿಸಲಾಗಿದೆ.ದೈನಂದಿನ ಆದಾಯದಲ್ಲಿ ಹೆಚ್ಚಳವಾಗಿದೆ. 545 ಹೊಸ ಬಸ್‍ಗಳನ್ನು ಖರೀದಿಸಲಾಗಿದೆ. ಪೋನ್ ವ್ಯವಸ್ಥೆಯನ್ನು ಸಹ ಪರಿಚಯಿಸಲಾಯಿತು. ಕೆಎಸ್‍ಆರ್‍ಟಿಸಿಯಲ್ಲಿ ಆಧುನೀಕರಣ ಮತ್ತು ಏಕರೂಪದ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಆ್ಯಂಟನಿ ರಾಜು ತಿಳಿಸಿದರು. ಎಐ ಕ್ಯಾಮೆರಾ ವ್ಯವಸ್ಥೆಯನ್ನು ಪರಿಚಯಿಸುವುದರ ಜೊತೆಗೆ ಚಾಲನಾ ಪರವಾನಗಿ ಮತ್ತು ಆರ್‍ಸಿ ಪುಸ್ತಕವನ್ನು ಸ್ಮಾರ್ಟ್ ಕಾರ್ಡ್‍ಗಳಾಗಿ ಮಾಡಲಾಗಿದೆ ಎಂದಿರುವರು .