ಹಜಾರಿಬಾಗ್,: ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಗಡಿಯಲ್ಲಿ ಸಂಪೂರ್ಣವಾಗಿ ತಡೆ ಬೇಲಿ ನಿರ್ಮಾಣ ಕಾರ್ಯ ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಹಜಾರಿಬಾಗ್,: ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ಗಡಿಯಲ್ಲಿ ಸಂಪೂರ್ಣವಾಗಿ ತಡೆ ಬೇಲಿ ನಿರ್ಮಾಣ ಕಾರ್ಯ ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 59ನೇ ಸಂಸ್ಥಾಪನಾ ದಿನ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಗೌರವವಂದನೆ ಸ್ವೀಕರಿಸಿ ಮಾತನಾಡಿದ ಅವರು, 'ಈ ಎರಡು ದೇಶಗಳೊಂದಿಗಿನ ಗಡಿಯಲ್ಲಿ ಬೇರೆ ಬೇರೆ ಕಡೆ ಬಾಕಿಯಿರುವ ಒಟ್ಟು 60 ಕಿ.ಮೀ.
'ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ-ಪಾಕಿಸ್ತಾನ ಮತ್ತು ಭಾರತ- ಬಾಂಗ್ಲಾದೇಶ ಗಡಿಯಲ್ಲಿ 560 ಕಿ.ಮೀ. ನಷ್ಟು ಬೇಲಿ ನಿರ್ಮಿಸಲಾಗಿದೆ. ಗಡಿಯಲ್ಲಿ ತಡೆ ಬೇಲಿ ಇಲ್ಲದ ಜಾಗಗಳಲ್ಲಿ ಒಳನುಸುಳುವಿಕೆ ಮತ್ತು ಕಳ್ಳಸಾಗಣೆ ಪ್ರಯತ್ನ ನಡೆಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಎರಡೂ ಗಡಿಗಳಲ್ಲಿ ಬೇಲಿ ಹಾಕಿ ಸಂಪೂರ್ಣ ಭದ್ರಪಡಿಸಲಾಗುವುದು' ಎಂದರು.