ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿ ಭಾವಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಅಲ್ಲದೆ, ಸಾಕಷ್ಟು ಹಂಚಿಕೆಯಾಯಿತು.
ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತೆಗೆದುಕೊಂಡಿದ್ದ ಸೆಲ್ಫಿ ಭಾವಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಅಲ್ಲದೆ, ಸಾಕಷ್ಟು ಹಂಚಿಕೆಯಾಯಿತು.
ದುಬೈನಲ್ಲಿ ನಡೆದ 'ಸಿಒಪಿ 28' ಹವಾಮಾನ ಶೃಂಗಸಭೆಯಲ್ಲಿ ಈ ಸೆಲ್ಫಿ ಕ್ಲಿಕ್ಕಿಸಲಾಗಿತ್ತು.
ಶನಿವಾರ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, 'ಗೆಳೆಯರ ಭೇಟಿ ಎಂದಿಗೂ ಖುಷಿ ನೀಡಲಿದೆ' ಎಂದಿದ್ದಾರೆ.
ಎಕ್ಸ್ ಜಾಲತಾಣದಲ್ಲಿ 'ಮೆಲೋಡಿ' ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದ್ದು, ಸಂಜೆಯವರೆಗೆ 1.19 ಲಕ್ಷ ಜನರು ಪೋಸ್ಟ್ ಮಾಡಿದ್ದರು. ಕ್ರಿಕೆಟ್ ವೀಕ್ಷಕ ವಿವರಣೆಯೊಂದರಲ್ಲಿ ಕೇಳಿಬಂದಿದ್ದ, 'ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ವಾಹ್' ಎಂಬ ಸಾಲುಗಳನ್ನೂ ಉಲ್ಲೇಖಿಸಿ ಜಾಲತಾಣಿಗರು ಮೆಚ್ಚುಗೆಯನ್ನು ಸೂಚಿಸಿದ್ದರು.
ಸಮಾವೇಶದಲ್ಲಿ ಮೋದಿ ಅವರು ಮೆಲೊನಿ ಅವರಲ್ಲದೆ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲ ಡ ಸಿಲ್ವಾ, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮೆರೂನ್, ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್, ಟರ್ಕಿ ಅಧ್ಯಕ್ಷ ಆರ್.ಟಿ.ಎರ್ಡೊಗನ್ ಸೇರಿದಂತೆ ಹಲವರನ್ನು ಭೇಟಿಯಾಗಿದ್ದರು.