ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನುಕೂಲಕರವಾದ ರಾಜಕೀಯ ಮಾಡುವವರು ಗಾಂಧಿ ಕುಟುಂಬದ ಸುತ್ತ ಇದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನುಕೂಲಕರವಾದ ರಾಜಕೀಯ ಮಾಡುವವರು ಗಾಂಧಿ ಕುಟುಂಬದ ಸುತ್ತ ಇದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ಹೇಳಿದ್ದಾರೆ.
ಶಿವಸೇನಾದ ಮುಖವಾಣಿ ಸಾಮ್ನಾದ ಸಾಪ್ತಾಹಿಕ ಅಂಕಣ ರೋಖ್‌ಟೋಕ್‌ನಲ್ಲಿ ರಾವುತ್, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆಯೂ ಅನುಮಾನ್ನೂ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಅಂಚೆ ಮತಪತ್ರಗಳ ಎಣಿಕೆ ವೇಳೆ ಕಾಂಗ್ರೆಸ್ 199ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುಂದಿತ್ತು. ಇವಿಎಂನಲ್ಲಿನ ಮತಗಳ ಎಣಿಕೆ ಆರಂಭವಾದಾಗ ಪರಿಸ್ಥಿತಿ ಬದಲಾಯಿತು ಎಂದು ಅವರು ಹೇಳಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಅನುಕೂಲಕರವಾದ ರಾಜಕೀಯ ಮಾಡುವವರು ಗಾಂಧಿ ಕುಟುಂಬದ ಸುತ್ತ ಇದ್ದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ'ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲನಾಥ್ ಅವರನ್ನು ಉಲ್ಲೇಖಿಸಿ ರಾವುತ್ ಹೇಳಿದ್ದಾರೆ.
ಮೋದಿ ಅವರ ಗೆಲುವಿನ ಮ್ಯಾಜಿಕ್ ಮೂರು ರಾಜ್ಯಗಳಲ್ಲಿ ಸಫಲವಾಗಿದೆ. ಆದರೆ, ತೆಲಂಗಾಣದಲ್ಲಿ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದು ತಪ್ಪು ತಿಳುವಳಿಕೆ ಎಂದೂ ರಾಜ್ಯಸಭಾ ಸದಸ್ಯ ರಾವುತ್ ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಪಕ್ಷವು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ ಮಣಿಸಿದೆ ಎಂದು 2018ರ ವಿಧಾನಸಭೆ ಚುನಾವಣೆ ಉಲ್ಲೇಖಿಸಿ ರಾವುತ್ ಹೇಳಿದ್ದಾರೆ.
ಡಿಸೆಂಬರ್ 3 ರಂದು ಹೊರಬಿದ್ದ 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು.