ತಿರುವನಂತಪುರಂ: ತೀವ್ರ ಒತ್ತಡದ ಕರ್ತವ್ಯ ನಿರ್ವಹಣೆಯ ಪರಿಸ್ಥಿತಿಯಿಂದಾಗಿ ಕೇರಳ ಪೋಲೀಸ್ ವಿಭಾಗದಲ್ಲಿ ಕೆಲಸ ತೊರೆಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವರÀದಿಯೊಂದು ಬಹಿರಂಗಪಡಿಸಿದೆ. ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಅಂಕಿಅಂಶಗಳು ಸೂಚಿಸುತ್ತವೆ.
ಪ್ರಸ್ತುತ, 800 ಕ್ಕೂ ಹೆಚ್ಚು ನಿವೃತ್ತಿ ಅರ್ಜಿಗಳು ಅನುಮೋದನೆಗೆ ಬಾಕಿ ಉಳಿದಿವೆ.
ಇದಲ್ಲದೇ ದೀರ್ಘ ರಜೆ ಹಾಕಿ ದೂರ ಉಳಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲಸದ ಹೊರೆ ಮತ್ತು ಮಾನಸಿಕ ಒತ್ತಡವು ಪೋಲೀಸ್ ವಿಭಾಗದಲ್ಲಿ ತಲೆನೋವಾಗಿದೆ. ನಾಲ್ಕು ವರ್ಷಗಳಲ್ಲಿ 169 ಪೋಲೀಸರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಕೋಝಿಕೋಡ್ ನಗರದಿಂದ ಹೆಚ್ಚಿನ ನಿವೃತ್ತಿ ಅರ್ಜಿಗಳು ಸಲ್ಲಿಕೆಯಾಗಿದೆ. 22 ಪೋಲೀಸರು ಅರ್ಜಿ ಹಾಕಿದ್ದಾರೆ. ಎರಡನೇ ಸ್ಥಾನದಲ್ಲಿ ಮಲಪ್ಪುರಂ - 18 ಜನರು. 15 ಜನರೊಂದಿಗೆ ಕೊಟ್ಟಾಯಂ ಮೂರನೇ ಸ್ಥಾನದಲ್ಲಿದೆ.
64 ಮಂದಿ ಆರೋಗ್ಯ ಸಮಸ್ಯೆಯಿಂದ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದ 27 ಮಂದಿ, ಮೇಲಧಿಕಾರಿಗಳ ಅನುಚಿತ ವರ್ತನೆಯಿಂದ ಮೂವರು, ವಿದೇಶಿ ಕೆಲಸಕ್ಕೆ ಏಳು ಮಂದಿ ಹಾಗೂ ಸ್ವಂತ ಉದ್ದಿಮೆ ಆರಂಭಿಸಲು ಮೂವರು ಅರ್ಜಿ ಸಲ್ಲಿಸಿದ್ದಾರೆ.
ತಿರುವನಂತಪುರಂ ನಗರ ಸಂಚಾರ ವಿಭಾಗದ ಅಧಿಕಾರಿಯೊಬ್ಬರು ನಿವೃತ್ತಿಗೆ ಅರ್ಜಿ ಸಲ್ಲಿಸಿರಲಿಲ್ಲ. ಏಕೆಂದರೆ ಕೆಲವೊಮ್ಮೆ ಅರ್ಜಿ ಪಾಸ್ ಆಗಲು ವರ್ಷಗಳೇ ಬೇಕಾಗಬಹುದು. ಹೀಗಾಗಿ ಎರಡು ದಿನ ರಜೆ ಹಾಕಿ ನ್ಯೂಜಿಲೆಂಡ್ ಗೆ ತೆರಳಿದ್ದರು. ಅಲ್ಲಿ ಹಣ್ಣುಗಳನ್ನು ಪ್ಯಾಕ್ ಮಾಡುವ ಕೆಲಸಕ್ಕೆ ಸೇರಿಕೊಂಡರು. ಉತ್ತಮ ಸಂಬಳ ಮತ್ತು ಮನಸ್ಸಿನ ಶಾಂತಿ ಎನ್ನುತ್ತಾರೆ ಅವರು.
ಇತ್ತೀಚೆಗೆ ಡಿವೈಎಸ್ಪಿ ಸಿ.ರಾಜೀವ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಆಲಪ್ಪುಳ ನಾರ್ಕೋಟಿಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ಸಿ. ರಾಜೀವ್ ಪ್ರಸ್ತುತ ಟೆಕ್ನೋಪಾರ್ಕ್‍ನ ಜಾಹೀರಾತು ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಏನೇ ಮಾಡಿದರೂ ಒಳ್ಳೆಯ ಮಾತು ಸಿಗುವುದು ಕಷ್ಟ. ಇಂಧನ ಖಾಲಿಯಾಗುವುದು ದೊಡ್ಡ ತಲೆನೋವಾಗಿದೆ. ಮಾನಸಿಕ ಒತ್ತಡವೂ ಹೆಚ್ಚು. ಕೆಲಸಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವುದು ಅನೇಕ ಅಧಿಕಾರಿಗಳಲ್ಲಿ ತೀವ್ರ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರೇ ಹೆಚ್ಚು.
2023ರಲ್ಲಿ 13 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿರುವನಂತಪುರಂ ಗ್ರಾಮಾಂತರದಲ್ಲಿ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ - 10 ಜನರು.
ಅತಿಯಾದ ಕೆಲಸದ ಹೊರೆ ಹಾಗೂ ಮೇಲಧಿಕಾರಿಗಳ ಒತ್ತಡ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. .
ಗ್ರಾಮಾಂತರ ಎಸ್ಪಿ ಕಿರಣ್ ನಾರಾಯಣನ್ ಅವರು ಪೋಲೀಸರೊಂದಿಗೆ ಊಟ ಮಾಡಿ ಕುಟುಂಬದ ವಿಷಯಗಳನ್ನು ಹಂಚಿಕೊಳ್ಳುತ್ತಿರುವ ಚಿತ್ರ ಇತ್ತೀಚೆಗೆ ವೈರಲ್ ಆಗಿತ್ತು. ಈ ಚಿತ್ರವನ್ನು ಹಲವು ಪೋಲೀಸ್ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಾಕೆಂದರೆ ಅಂತಹ ಅನುಭವಗಳು ಅವರ ಜೀವನದಲ್ಲಿ ಅಪೂರ್ವ. ಹಲವು ಪೆÇಲೀಸ್ ಅಧಿಕಾರಿಗಳು ವೈಯಕ್ತಿಕ ಬದುಕಿನ ಒತ್ತಡದಿಂದಲೇ ಜೀವನ ನಡೆಸುತ್ತಿದ್ದಾರೆ ಎಂಬ ದೂರು ಇದೆ.