ಕಾಸರಗೋಡು: ಭಾರತೀಯ ಪಿಂಚಣಿದಾರರ ಮಹಾಸಂಘದ ಸಭೆಯು ಡಿಸೆಂಬರ್ 5 ರಂದು ಚಂದ್ರಗಿರಿ ಶಾಸ್ತ ದೇವಾಲಯದ ವಠಾರದಲ್ಲಿ ಜರುಗಿತು. ಸಂಘಟನೆ ಜಿಲ್ಲಾ ಜಿಲ್ಲಾಧ್ಯಕ್ಷ ಎಮ್ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು.
ಅಖಿಲಭಾರತ ಅಧ್ಯಕ್ಷ ಶ್ರೀ ಸಿ ಹೆಚ್ ಸುರೇಶ್ ಸಮ್ಮೇಳನದ ಸಮಗ್ರ ಮಾಹಿತಿ ನೀಡಿದರು. 2024 ಜನವರಿ 28ರಿಂದ 30ರ ವರೆಗೆ ಕಾಸರಗೋಡು ಕಳ್ನಾಡಿನಲ್ಲಿ ನಡೆಯಲಿವ ರಾಜ್ಯ ಸಮ್ಮೇಳನಕ್ಕೆ ಜಿಲ್ಲೆಯಿಂದ 100 ಜನ ಸದಸ್ಯರನ್ನು ಭಾಗವಹಿಸುವಂತೆ ಮಾಡಲು ಸಬೆಯಲ್ಲಿ ತೀರ್ಮಾನಿಸಲಾಯಿತು. ನವಕೇರಳ ಸಮ್ಮೇಳನಗಳಿಗೆ ಕೇರಳ ಸರ್ಕಾರವು ಕೋಟ್ಯಂತರ ರೂ. ಹಣವನ್ನು ವೆಚ್ಚ ಮಾಡುತ್ತಿದ್ದರೂ, ನಿವೃತ್ತ ಪಿಂಚಣಿದಾರರಿಗೆ ಮೂರು ವರ್ಷಗಳಿಂದ ಕ್ಷೇಮಭತ್ತೆಗಳನ್ನು ನೀಡದೆ ವಂಚಿಸುತ್ತಿರುವ ಸರ್ಕಾರದ ಧೋರಣೆ ಬಗ್ಗೆ ಸಭೆಯಲ್ಲಿ ಖಂಡಿಸಲಾಯಿತು.
ಸಭೆಯಲ್ಲಿ ಕೆ. ಕುಞÂಕಣ್ಣನ್, ಸಿ ಕೆ ಉಮಾದೇವಿ, ಬೇಬಿ,ಶ್ರೀ ಕೆ ಬಾಲಚಂದ್ರ, ಡಿ ಸತೀಶ, ಶಶಿಧರನ್.ಕೆ, ಮಾಧವನ್ ನಾಯರ್ ,ಎಮ್ ಚಂದು,ರವೀಂದ್ರನ್ ನಾಯರ್, ಜಿ.ದಿವಾಕರನ್,ವಸಂತ ಆರ್, ಎ.ಮುರಳೀಧರನ್, ಎಮ್ ಕುಂಞಂಬು ನಾಯರ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಶ್ರೀ ಜಯೇಂದ್ರ ಸ್ವಾಗತಿಸಿದರು. ಸಿ ಕೆ ಉಮಾದೇವಿ ವಂದಿಸಿದರು.