ತಿರುವನಂತಪುರಂ: ಡಿಜಿಪಿ ಮನೆಯಲ್ಲಿ ಮಹಿಳಾ ಮೋರ್ಚಾ ನಡೆಸಿದ ಪ್ರತಿಭಟನೆ ಸಂಬಂಧ ಮೂವರು ಪೆÇಲೀಸರನ್ನು ಅಮಾನತು ಮಾಡಲಾಗಿದೆ. ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ.
ಆರ್.ಆರ್.ಆರ್.ಎಫ್. ಪೋಲೀಸರಾದ ಮುರಳೀಧರನ್ ನಾಯರ್, ಮೊಹಮ್ಮದ್ ಶೆಬಿನ್ ಮತ್ತು ಸಜಿನ್ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಮೂವರು ಪೆÇಲೀಸರು ಡಿಜಿಪಿ ಮನೆಗೆ ಕಾವಲು ಕಾಯುತ್ತಿದ್ದರು. ಮಹಿಳಾ ಮೋರ್ಚಾ ಕಾರ್ಯಕರ್ತರು ಡಿಜಿಪಿ ಅಧಿಕೃತ ನಿವಾಸಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ್ದರು. ಅವರನ್ನು ಸ್ಥಳದಿಂದ ಸ್ಥಳಾಂತರಿಸಲು ವಿಳಂಬ ಮಾಡಿದ ಕಾರಣ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಮಹಿಳಾ ಪೆÇಲೀಸರು ಇಲ್ಲದ ಕಾರಣ ಪ್ರತಿಭಟನೆ ಮುಂದುವರೆಯಿತು. ನಂತರ ಪೋಲೀಸರು ಬಂದು ಬಲವಂತವಾಗಿ ಸ್ಥಳದಿಂದ ಹೊರ ಹಾಕಿದರು.
ಡಿಜಿಪಿ ಅಥವಾ ಉನ್ನತ ಅಧಿಕಾರಿಗಳ ಅನುಮತಿ ಪಡೆಯದೆ ಪೋಲೀಸರು ಗೇಟ್ ತೆರೆದಿದ್ದು, ಈ ಕ್ರಮದಿಂದ ಪೋಲೀಸ್ ಇಲಾಖೆಯ ಹೆಸರಿಗೆ ಮಸಿ ಬಳಿಯಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.