ಸಮರಸ ಚಿತ್ರಸುದ್ದಿ: ಪೆರ್ಲ: ಪೇರಾಲ್ ಕಣ್ಣೂರಿನಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಎಗ್ರೆಡ್ ಪಡೆದು ಶ್ರೀಶಾರದಾಂಬ ಪ್ರೌಢ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಆಯೇಷತ್ ಲಿಬ್ಸತ್ (ಉರ್ದು ಕಥಾ ರಚನೆ ಮತ್ತು ಉರ್ದು ಉಪನ್ಯಾಸ). ಇಝ ಫಾತಿಮಾ (ಇಂಗ್ಲೀಷ್ ಕಥಾ ರಚನೆ), ಅಯಿಷ(ಜಲವರ್ಣ ಚಿತ್ರ ರಚನೆ), ಫಾತಿಮತ್ ಶಿಫಾನ (ಉರ್ದು ಕವಿತೆ ರಚನೆ) ಬಹುಮಾನ ಗಳಿಸಿಕೊಂಡಿದ್ದಾರೆ. ಶಾಲಾ ಆಡಳಿತ ಸಮಿತಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ರಕ್ಷಕ ಸಮಿತಿ ವಿಜೇತರನ್ನು ಅಭಿನಂದಿಸಿದ್ದಾರೆ.