HEALTH TIPS

ಆತ್ಮಹತ್ಯೆ ಪ್ರಕರಣ-ಸಿಕ್ಕಿಂ ಅಗ್ರಸ್ಥಾನ: ಎನ್‌ಸಿಆರ್‌ಬಿ ವರದಿ

              ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚಿನ ವರದಿ ಹೇಳಿದೆ.

              ವರದಿಯ ಪ್ರಕಾರ, ಸಿಕ್ಕಿಂನಲ್ಲಿ ಶೇ 43.1ರಷ್ಟು ಆತ್ಮಹತ್ಯೆ ಪ್ರಮಾಣ ದಾಖಲಾಗಿದೆ. ನಂತರದ ಸ್ಥಾನದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಶೇ 42.8, ಪುದುಚೇರಿ ಶೇ 29.7, ಕೇರಳ ಶೇ 28.5 ಹಾಗೂ ಛತ್ತೀಸಢದಲ್ಲಿ ಶೇ 28.2ರಷ್ಟು ವರದಿಯಾಗಿದೆ.

            ರಾಷ್ಟ್ರೀಯ ಸರಾಸರಿ ‌ಶೇ 12.4 ರಷ್ಟಿದೆ. 2022ರಲ್ಲಿ ದೇಶಾದ್ಯಂತ ಒಟ್ಟು 1,70,924 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.

            2022ರಲ್ಲಿ ಸಿಕ್ಕಿಂನಲ್ಲಿ 293 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಈ ಬಾರಿ ಆತ್ಮಹತ್ಯೆ ದರದಲ್ಲಿ ಶೇ 10.2ರಷ್ಟು ಹೆಚ್ಚಳವಾಗಿದೆ ಎಂದು ವರದಿ ಎನ್‌ಸಿಆರ್‌ಬಿ ತಿಳಿಸಿದೆ.

                  ಕಳೆದ ವರ್ಷ ಸಿಕ್ಕಿಂನಲ್ಲಿ ಒಟ್ಟು 226 ಪುರುಷರು ಮತ್ತು 67 ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಲ್ಲಿ 87 ಮಂದಿಯ ಆತ್ಮಹತ್ಯೆ ನಿರ್ಧಾರಕ್ಕೆ ನಿರುದ್ಯೋಗ ಸಮಸ್ಯೆ ಕಾರಣ ಎಂದು ತಿಳಿದು ಬಂದಿದೆ.

                2011ರ ಜನಗಣತಿಯ ಪ್ರಕಾರ ಸಿಕ್ಕಿಂ 6.10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹಿಂದಿನ ಎರಡು ವರ್ಷಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. 2ನೇ ಸ್ಥಾನದಲ್ಲಿ ಸಿಕ್ಕಿಂ ಇತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries