ಕಾಸರಗೋಡು: ಜಿಲ್ಲಾ ಕುಟುಂಬಶ್ರೀ ಮಿಷನ್ ಆಶ್ರಯದಲ್ಲಿ ಅಂತರಾಷ್ಟ್ರೀಯ ಏಡ್ಸ್ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಜಾಗೃತಿ ಅಭಿಯಾನ ನಡೆಸಲಾಯಿತು. ಕಾಸರಗೋಡು ಕಲೆಕ್ಟರೇಟ್ ಪರಿಸರದಲ್ಲಿ ನಡೆದ ರೆಡ್ ರಿಬ್ಬನ್ ಅಭಿಯಾನವನ್ನು ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಉದ್ಘಾಟಿಸಿದರು.
ಈ ವರ್ಷದ ಎಚ್‍ಐವಿ ದಿನದ ಥೀಮ್ ‘ಲೆಟ್ ಸೊಸೈಟಿ ಲೀಡ್’ ಎಂದಾಗಿದೆ. ಕುಟುಂಬಶ್ರೀ ಅಭಿಯಾನದ ಮೂಲಕ ಏಡ್ಸ್ ಎಂಬ ಮಹಾನ್ ಕಾಯಿಲೆಯ ವಿರುದ್ಧ ಹೋರಾಡುವ ಗುರಿಯನ್ನು ಹೊಂದಿದೆ. ಸಹಾಯಕ ಜಿಲ್ಲಾ ಮಿಷನ್ ಸಂಯೋಜಕ ಡಿ.ಹರಿದಾಸ್, ಜಿಲ್ಲಾ ಕಾರ್ಯಕ್ರಮ ನಿರ್ವಾಹಕರು, ಬ್ಲಾಕ್ ಸಂಯೋಜಕರು ಹಾಗೂ ಸಮುದಾಯ ಮಾರ್ಗದರ್ಶಕರು ಭಾಗವಹಿಸಿದ್ದರು. ತರುವಾಯ, ಕುಟುಂಬಶ್ರೀಯು ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಸಿಡಿಎಸ್‍ಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿತು. ಮುಂದಿನ ದಿನಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿಯೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.