ತಿರುವನಂತಪುರಂ: ವೈದ್ಯಕೀಯ ಕಾಲೇಜಿನ ಯುವ ವೈದ್ಯೆ ಡಾ. ಶಹನಾ ಆತ್ಮಹತ್ಯೆ ಪತ್ರದಲ್ಲಿರುವ ಹಲವು ವಿವರಗಳನ್ನು ಪೋಲೀಸರು ಬಚ್ಚಿಟ್ಟಿದ್ದಾರೆ ಎನ್ನಲಾಗಿದೆ.
ಆರೋಪಿ ಡಾ. ರುವೈಸ್ ನ ಹೆಸರು ಆರಂಭದಲ್ಲಿ ಮರೆಮಾಚಿದ್ದ ಪೆÇಲೀಸರು ನಿನ್ನೆ ನ್ಯಾಯಾಲಯಕ್ಕೆ ನೀಡಿದ ರಿಮಾಂಡ್ ವರದಿಯಲ್ಲಿ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ.
ವರದಕ್ಷಿಣೆ ನೀಡಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಶಹನಾ ಪತ್ರದಲ್ಲಿ ಬರೆದಿದ್ದರು. ಕೇವಲ ಪತ್ರದ ಆಧಾರದಲ್ಲಿ ರುವೈಸ್ ವಿರುದ್ಧ ಪೋಲೀಸರು ಮೊದಲ ದಿನವೇ ಜಾಮೀನು ರಹಿತ ಆರೋಪ ಹೊರಿಸಿ ಪ್ರಕರಣ ದಾಖಲಿಸಬಹುದಿತ್ತು. ಆದರೆ ವೈದ್ಯಕೀಯ ಕಾಲೇಜು ಪೋಲೀಸರು ಮಾತ್ರ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಬರಹದಲ್ಲಿ ವರದಕ್ಷಿಣೆ ವಿಷಯ ಅಥವಾ ಯಾರ ವಿರುದ್ಧವೂ ಯಾವುದೇ ಆರೋಪವಿಲ್ಲ ಎಂದು ಪೋಲೀಸರು ಹೇಳಿದ್ದರು.
ಗಂಟೆಗಳ ವಿಚಾರಣೆಯ ನಂತರ ಪೋಲೀಸರು ನಿನ್ನೆ ರುವೈಸ್ ನನ್ನು ಬಂಧಿಸಿದರು. ಶಹನಾ ಅವರ ಸಹೋದರ ರುವೈಸ್ ವಿರುದ್ಧ ಆರೋಪಗಳನ್ನು ಮುಂದಿಟ್ಟರೂ, ಆರಂಭದಲ್ಲಿ ಪೆÇಲೀಸರು ಅದನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ. ನಂತರ ಶಹನಾ ಅವರ ತಾಯಿ ಮತ್ತು ಸಹೋದರಿ ನೀಡಿದ ಹೇಳಿಕೆಯ ಆಧಾರದ ಮೇಲೆ ರುವೈಸ್ ವಿರುದ್ಧ ಜಾಮೀನು ರಹಿತ ಕಲಂಗಳನ್ನು ಸೇರಿಸಲಾಯಿತು. ಪರಾರಿಯಾಗಿದ್ದ ರುವೈಸ್‍ನನ್ನು ಕೊಲ್ಲಂನ ಕರುನಾಗಪಲ್ಲಿಯಲ್ಲಿರುವ ಸಂಬಂಧಿಕರ ಮನೆಯಿಂದ ಪೋಲೀಸರು ವಶಕ್ಕೆ ತೆಗೆದುಕೊಂಡರು.