ಕಾಸರಗೋಡು: ಮಾಜಿ ಸಚಿವ, ರಾಜಕೀಯ ಧುರೀಣ ಚೆರ್ಕಳಂ ಅಬ್ದುಲ್ಲ ಸಂಸ್ಮರಣಾ ಸಂಗಮದ ಯಶಸ್ವಿಗಾಗಿ ಒಂದು ಸಾವಿರ ಮಂದಿಯ ಪ್ರತಿನಿಧಿಗಳ ಆನ್‍ಲೈನ್ ನೋಂದಾವಣೆಗೆ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ, ಖ್ಯಾತ ಉದ್ಯಮಿ ಅಬ್ದುಲ್ ಲತೀಫ್ ಉಪ್ಪಳ ಚಾಲನೆ ನೀಡಿದರು. ಡಿ. 25ರಂದು ಮಧ್ಯಾಹ್ನ 2ಗಂಟೆಗೆ ಮಂಜೇಶ್ವರ ಅನಾಥಾಶ್ರಮದಲ್ಲಿ ನಡೆಯಲಿರುವ ಚೆರ್ಕಳಂ ಅಬ್ದುಲ್ಲ ಸಂಸ್ಮರಣೆಯಲ್ಲಿ ಪ್ರತಿನಿಧಿಗಳನ್ನು ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಆನ್‍ಲೈನ್ ನೋಂದಾವಣೆ ಯೋಜಿಸಲಾಗಿತ್ತು.
ಸಮಾರಂಭದಲ್ಲಿ ರಕ್ಷಾಧಿಕಾರಿ ಶಾಸಕ ಎನ್.ಎ ನೆಲ್ಲಿಕುನ್ನು, ಮುನೀರ್ ಹಾಜಿ ಕಂಬಾರ್, ಪದಾಧಿಕಾರಿಗಳಾದ ಅಸೀಸ್ ಮರಿಕ್ಕೆ, ಯು,ಕೆ ಸೈಫುಲ್ಲಾ ತಙಳ್, ಮೊಯ್ದೀನ್‍ಕುಞÂ, ಎ.ಕೆ ಆರಿಫ್, ಆಲಿ ಮಾಸ್ಟರ್, ಚೆರ್ಕಳಂ ಅಬ್ದುಲ್ಲ ಪೌಂಡೇಶನ್ ಅಧ್ಯಕ್ಷ ನಾಸರ್ ಚೆರ್ಕಳ, ಕಾರ್ಯದರ್ಶಿ ಮುಜೀಬ್ ತಳಂಗರ, ಕೋಶಾಧಿಕಾರಿ ಕೆ.ಬಿ.ಎಂ ಶರೀಫ್, ಉಪಾಧ್ಯಕ್ಷ ಬಿ.ಅಶ್ರಫ್, ಅಶ್ರಫ್ ನಾಲ್ತಡ್ಕ, ಸಲೀಂ ಚೌಕಿ, ನಫೀಸಾ ಶಿಸಾ ಉಪಸ್ಥಿತರಿದ್ದರು.
25ರಂದು ಸಂಸ್ಮರಣೆ:
ಚೆರ್ಕಳಂ ಅಬ್ದುಲ್ಲಾ ಸಂಸ್ಮರಣಾ ಸಮಾರಂಭ ಹಾಗೂ ಸಾಂಸ್ಕøತಿಕ ಸಮ್ಮೇಳನ ಡಿ. 25ರಂದು ಮಧ್ಯಾಹ್ನ 2ಗಂಟೆಗೆ ಮಂಜೇಶ್ವರ ಅನಾಥಾಶ್ರಮ ವಠಾರದಲ್ಲಿ ಜರುಗಲಿದೆ. ಪಾಣಕ್ಕಾಡ್ ಸಯ್ಯದ್ ಸ್ವಾದಿಕ್ ಆಲಿ ಶಿಹಾಬ್ ತಙಳ್ ಸಮಾರಂಭ ಉದ್ಘಾಟಿಸುವರು. ಸಯ್ಯದ್ ಕೆ.ಎಸ್ ಆಲಿ ತಙಳ್ ಕುಂಬೋಳ್, ವಿಧಾನಸಭಾ ಸ್ಪೀಕರ್ ಯೂ.ಟಿ ಖಾದರ್, ಮಾಜಿ ಸಚಿವ ಪಿ.ಕೆ ಕುಞËಲಿಕುಟ್ಟಿ, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಸಂಸದ ಇ.ಟಿ ಅಹಮ್ಮದ್ ಬಶೀರ್, ಸಂಸದ ಪಿ.ವಿ ಅಬ್ದುಲ್ ವಹಾಬ್, ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ಪಾಲ್ಗೊಳ್ಳುವರು.
ಸಂಜೆ 4.30ಕ್ಕೆ ನಡೆಯುವ ಸಾಂಸ್ಕøತಿಕ ಸಮ್ಮೇಳನದಲ್ಲಿ ಸಚಿವ ರೋಶಿ ಆಗಸ್ಟಿನ್, ಸಯ್ಯದ್ ಮುನವರಲಿ ಶಿಹಾಬ್ ತಙಳ್, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಬೇಳ ಇಗರ್ಜಿ ಧರ್ಮಗುರು ವಂದನೀಯ ಸ್ಟ್ಯಾನಿ ಪಿರೇರಾ, ಸಂಸದರು, ಶಾಸಕರು ಪಾಲ್ಗೊಳ್ಳುವರು.