ಎರ್ನಾಕುಳಂ: ಕುಸಾಟ್ ಟೆಕ್ ಫೆಸ್ಟ್ ವೇಳೆ ಸಂಭವಿಸಿದ ದುರಂತದ ಕುರಿತು ಉಪ ಸಮಿತಿ ವರದಿ ಹೊರಬಿದ್ದಿದೆ. ಕುಸ್ಯಾಟ್ ಸಂಸ್ಥೆಯಲ್ಲಿ ಗಂಭೀರ ವೈಫಲ್ಯ ಉಂಟಾಗಿದೆ ಎಂದು ವರದಿ ಹೇಳುತ್ತದೆ.
ಕುಸಾಟ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಪ್ರಾಂಶುಪಾಲರು ಮತ್ತು ರಿಜಿಸ್ಟ್ರಾರ್ ಕಚೇರಿ ತಪ್ಪಿತಸ್ಥರು. ಶಿಕ್ಷಕರು ಸೇರಿದಂತೆ ಏಳು ಮಂದಿಯಿಂದ ಸಿಂಡಿಕೇಟ್ ಸ್ಪಷ್ಟನೆ ಕೇಳಿದೆ.
ಸಂಸ್ಥೆಯಲ್ಲಿನ ತಪ್ಪು ಹಾಗೂ ಜನಸಂದಣಿ ನಿಯಂತ್ರಣದಲ್ಲಿ ಅನುಭವದ ಕೊರತೆಯೇ ಅಪಘಾತಕ್ಕೆ ಕಾರಣ ಎಂದು ವರದಿ ತಿಳಿಸಿದೆ. ಕಾರ್ಯಕ್ರಮಕ್ಕೆ ಪೋಲೀಸ್ ನೆರವು ಪಡೆಯುವಲ್ಲಿಯೂ ರಿಜಿಸ್ಟ್ರಾರ್ ಕಚೇರಿ ವಿಫಲವಾಗಿದೆ. ಪ್ರಾಂಶುಪಾಲರು ಪತ್ರ ಬರೆದರೂ ತಹಶೀಲ್ದಾರ ಕಚೇರಿ ಕ್ರಮ ಕೈಗೊಂಡಿಲ್ಲ. ಅಪಘಾತ ನಡೆದ ಬಯಲು ಸಭಾಂಗಣವನ್ನು ಮೇಲ್ದರ್ಜೆಗೇರಿಸಲು ಸೂಚಿಸಲಾಗಿದೆ.
ನವೆಂಬರ್ 25 ರಂದು, ಕುಸಾಟ್ ನಲ್ಲಿ ದುರಂತ ಸಂಭವಿಸಿತ್ತು. ಟೆಕ್ ಫೆಸ್ಟ್ ವೇಳೆ ನೂಕುನುಗ್ಗಲು ಉಂಟಾಗಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಎರಡು ದಿನಗಳ ಟೆಕ್ ಫೆಸ್ಟ್ ನ ಸಮಾರೋಪ ದಿನದಂದು ಈ ದಾರುಣ ಘಟನೆ ನಡೆದಿತ್ತು. ಕಾಲ್ತುಳಿತದಲ್ಲಿ ಉಸಿರುಗಟ್ಟಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.