ಕೋಲ್ಕತ್ತಾ: ಚಂಡಮಾರುತದ ಮುನ್ನೆಚ್ಚರಿಕೆಯಿಂದಾಗಿ ರೈಲು ಸಂಚಾರ ರದ್ದುಗೊಂಡು ಕೋಲ್ಕತ್ತಾದಲ್ಲಿ ಸಿಲುಕಿರುವ ಕೇರಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನೆರವಿಗೆ ಬಂಗಾಳದ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಅವರು ಮುಂದಾದರು.
ರೈಲು ರದ್ದಾದ ನಂತರ ಶ್ರೀಶಂಕರ ವಿಶ್ವವಿದ್ಯಾಲಯದ ಕಾಲಡಿ ಮತ್ತು ತಿರೂರ್ ಕೇಂದ್ರಗಳ 58 ಸಮಾಜಕಾರ್ಯ ವಿದ್ಯಾರ್ಥಿಗಳು ಮತ್ತು ಆರು ಶಿಕ್ಷಕರ ಗುಂಪು ಕೋಲ್ಕತ್ತಾದಲ್ಲಿ ಸಿಲುಕಿಕೊಂಡಿತು. ಅವರು ಬಳಿಕ ಕೇರಳ ರಾಜಭವನಕ್ಕೆ ಮಾಹಿತಿ ನೀಡಿದರು.
ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಅವರು ಬಂಗಾಳದ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗ್ಗೆ ವಿವರಿಸಿದರು. ಆನಂದ ಬೋಸ್ ನೇರವಾಗಿ ಮಧ್ಯಪ್ರವೇಶಿಸಿ ರೈಲಿನಲ್ಲಿ ವಿಶೇಷ ಬೋಗಿ ಸ್ಥಾಪಿಸಲು ಸೂಚನೆ ನೀಡಿದರು. ಹೀಗಾಗಿ ಸೋಮವಾರ ಸಂಜೆ ತಂಡದವರ ವಾಪಸಾತಿಗೆ ಹಾದಿ ಸುಗಮವಾಯಿತು. ರಾಜ್ಯಪಾಲರು ತಂಡವನ್ನು ಕೋಲ್ಕತ್ತಾ ರಾಜಭವನಕ್ಕೆ ಸೋಮವಾರ ಸಭೆಗೆ ಆಹ್ವಾನಿಸಿದ್ದಾರೆ.
ಅನಾಸ್ ಎಂಕೆ ಮತ್ತು ರೇಷ್ಮಾ ಭಾರದ್ವಾಜ್ ನೇತೃತ್ವದಲ್ಲಿ ಎರಡು ಬ್ಯಾಚ್‍ಗಳಲ್ಲಿ ಮೇಘಾಲಯ, ಅಸ್ಸಾಂ ಮತ್ತು ಬಂಗಾಳ ರಾಜ್ಯಗಳಲ್ಲಿ ಸಮಾಜಕಾರ್ಯ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸವಾಗಿತ್ತು.
ಕೆನಡಾದಲ್ಲಿರುವ ಮಕ್ಕಳು ಕೊಟ್ಟಾಯಂನ ಇಲಂಜಿಯಲ್ಲಿ ತಮ್ಮ ತಾಯಿಯ ಮರಣೋತ್ತರ ಸಮಾರಂಭಕ್ಕೆ ಮನೆಗೆ ಬರಲು ಬಿಕ್ಕಟ್ಟಿನಲ್ಲಿದ್ದಾಗಲೂ, ಬಂಗಾಳ ರಾಜ್ಯಪಾಲರ ತಕ್ಷಣದ ಮಧ್ಯಪ್ರವೇಶವು ಕುಟುಂಬಕ್ಕೆ ಸಹಾಯ ಮಾಡಿತ್ತು.