ತಿರುವನಂತಪುರಂ: ಹೊಸ ಜಗತ್ತಿನಲ್ಲಿ ಹೊಸ ರೋಗಗಳು ಸವಾಲುಗಳನ್ನು ಒಡ್ಡುತ್ತವೆ. ಜೊತೆಗೆ ಆಯುರ್ವೇದ ಚಿಕಿತ್ಸೆಯಲ್ಲಿ ಅಗತ್ಯವಾದ ಕಚ್ಚಾವಸ್ತುಗಳ ಕೊರತೆಯೂ ಸಣ್ಣದಲ್ಲ ಎಂದು ಕೋಟ್ಟಕ್ಕಲ್ ಆರ್ಯವೈದ್ಯಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪಿ. ಮಾಧವನ್ ಕುಟ್ಟಿ ವಾರಿಯರ್ ಹೇಳಿದರು.
ಜಾಗತಿಕ ಆಯುರ್ವೇದ ಉತ್ಸವದ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ರಾಜಸ್ಥಾನ ವಿಶ್ವವಿದ್ಯಾಲಯದ ವಿಸಿ ಡಾ. ಪ್ರದೀಪ್ ಕುಮಾರ್ ಪ್ರಜಾಪತಿ ಅಧ್ಯಕ್ಷ ತೆ ವಹಿಸಿದ್ದರು.
ಅಟ್ರಿಮೆಡ್ ಪ್ರತಿನಿಧಿ ಡಾ.ಋಷಿಕೇಶ ದಾಮ್ಲೆ ಮಾತನಾಡಿ, ಅತ್ಯುತ್ತಮ ಆಯುರ್ವೇದ ಔಷಧಗಳಿಗೆ ಐರೋಪ್ಯ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಯೂನಿಲಿವರ್ ದಕ್ಷಿಣ ಏಷ್ಯಾ ಸಂಶೋಧನೆ ಮತ್ತು ಅಭಿವೃದ್ಧಿ ಮುಖ್ಯಸ್ಥ ಡಾ. ಸುಪ್ರಿಯಾ ಪುಣ್ಯಾನಿ ಮಾತನಾಡಿದರು. ಹಿಮಾಲಯ ಸ್ವಾಸ್ಥ್ಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡಾ. ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.
2009ರಲ್ಲಿ ಆಯುರ್ವೇದವನ್ನು ಔಷದÀವೆಂದು ಗುರುತಿಸಿದ ಸ್ವಿಟ್ಜರ್ಲೆಂಡ್ ತನ್ನ ಸಂವಿಧಾನದಲ್ಲಿ ಆಯುರ್ವೇದವನ್ನು ಸೇರಿಸಿರುವ ಏಕೈಕ ದೇಶವಾಗಿದೆ ಎಂದು ಡಾ. ಚಾಲ್ರ್ಸ್ ಎಲಿ ನಿಕೊಲೆರೆಟ್ ಹೇಳಿದರು. ‘ವಿವಿಧ ದೇಶಗಳಲ್ಲಿ ನಿಯಂತ್ರಕ ಅಂಶಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಲಾಟ್ವಿಯಾ ವಿಶ್ವವಿದ್ಯಾನಿಲಯದ ಪೂರಕ ಔಷಧ ಸಂಶೋಧಕಿ ಡಾ.ಸಿಂತಿಜಾ ಸೌಸಾ ಮಾತನಾಡಿದರು. ಲಾಟ್ವಿಯಾದಲ್ಲಿ ಆಯುಷ್ ಸಹಯೋಗದಲ್ಲಿ ಆಯುರ್ವೇದ ಶಿಕ್ಷಣ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಯುಎಇಯಲ್ಲಿ 630ಕ್ಕೂ ಹೆಚ್ಚು ಪಾರಂಪರಿಕ ವೈದ್ಯರಿದ್ದು, ಅವರಲ್ಲಿ 209 ಮಂದಿ ಆಯುರ್ವೇದ ವೈದ್ಯರಿದ್ದಾರೆ ಎಂದು ಡಾ. ಸೈಫುಲ್ಲಾ ಖಾಲಿದ್ ಆದಮ್ಜಿ ಹೇಳಿದರು.