ಕಾಸರಗೋಡು: ಕನ್ನಡ ಭಾಷಾ ಅಧ್ಯಾಪಕರಿಗಾಗಿ ನಡೆಸಲಾದ ರಾಜ್ಯಮಟ್ಟದ ಮೂರು ದಿವಸಗಳ ತರಬೇತಿಯ ಸಮಾರೋಪ ಸಮಾರಂಭ ಕಾಸರಗೋಡಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜರುಗಿತು.
ಕಾಸರಗೋಡು ಡಯಟ್ ನ ಪ್ರಾಂಶುಪಾಲರಾದ ಡಾ.ರಘುರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ದಿನೇಶನ್ ವಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಿಬಿರದಲ್ಲಿ ಮೂಡಿಬಂದ 'ಸೆರಗು- ಬೆರಗು' ಪ್ರಬಂಧ ಸಂಕಲನ ಹಾಗೂ 'ಹೊಂಗಿರಣ' ಕವನ ಸಂಕಲನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರೂ ಶಿಬಿರದ ಹಿರಿಯ ಸಂಪನ್ಮೂಲ ವ್ಯಕ್ತಿ ರಾಮಣ್ಣ ಮಾಸ್ಟರ್ ದೇಲಂಪಾಡಿ, ಸಂಪನ್ಮೂಲ ವ್ಯಕ್ತಗಳಾದ ದಿವ್ಯಗಂಗಾ, ಭಾಗ್ಯಲಕ್ಷ್ಮಿ ರೋಹಿತಾಕ್ಷಿ ಕೆ.ಬಿ. ಹಾಗೂ ಡಯಟ್ ಕಾಸರಗೋಡಿನ ಅಧ್ಯಾಪಕಿ ಪುಷ್ಪ. ಟಿ ಉಪಸ್ಥಿತರಿದ್ದರು. ಸರಸ್ವತಿ ಕೆ.ಎನ್ ಪ್ರಾರ್ಥನೆ ಹಾಡಿದರು. ಡಾ.ಶ್ರೀಶಕುಮಾರ ಪಿ ಸ್ವಾಗತಿಸಿದರು. ವೆಂಕಟಕೃಷ್ಣ ಮಾಸ್ಟರ್ ನಿರೂಪಿಸಿದರು ಪ್ರಶಾಂತ್ ಕುಮಾರ್ ಶೇಣಿ ವಂದಿಸಿದರು. ಶಿಬಿರಾರ್ಥಿಗಳ ಪರವಾಗಿ ಸಾವಿತ್ರಿ.ಎಂ., ಕಮಲಾಕ್ಷಿ ಟೀಚರ್, ಸರಸ್ವತಿ ಕೆ.ಎನ್.ಶ್ವೇತಕುಮಾರಿ ಧರ್ಮತ್ತಡ್ಕ ಅಭಿಪ್ರಾಯ ಮಂಡಿಸಿದರು.