HEALTH TIPS

ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆ: ಲಷ್ಕರ್ ಮುಖ್ಯಸ್ಥ ಹಫೀಜ್ ಆಪ್ತ ಹಂಜಲಾ ಅದ್ನಾನ್‌ ಗುಂಡಿಕ್ಕಿ ಕೊಲೆ

Top Post Ad

Click to join Samarasasudhi Official Whatsapp Group

Qries

              ಕರಾಚಿ:ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಮತ್ತೊಬ್ಬ ಶತ್ರುವಿನ ಹತ್ಯೆಯಾಗಿದೆ. ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಅದ್ನಾನ್ ಅಹ್ಮದ್ ಅಲಿಯಾಸ್ ಹಂಜಾಲಾ ಅದ್ನಾನ್ ನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 

              ಕರಾಚಿಯಲ್ಲಿ ಲಷ್ಕರ್ ಭಯೋತ್ಪಾದಕ ಹಂಜಲಾ ಅದ್ನಾನ್ ಮೇಲೆ ಅಪರಿಚಿತ ದಾಳಿಕೋರರು ದಾಳಿ ನಡೆಸಿದ್ದಾರೆ. 2015ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಮತ್ತು 2016ರಲ್ಲಿ ಪಾಂಪೋರ್‌ನಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ. ಪಾಂಪೋರ್ ದಾಳಿಯಲ್ಲಿ 8 ಯೋಧರು ಹುತಾತ್ಮರಾಗಿದ್ದರೆ, 22ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು.

                ಡಿಸೆಂಬರ್ 3ರ ರಾತ್ರಿ ಹಂಜಾಲಾ ಅದ್ನಾನ್ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ಮಾಡಿದರು. ಅವನ ಮೇಲೆ ನಿರಂತರವಾಗಿ ಗುಂಡುಗಳನ್ನು ಹಾರಿಸಲಾಯಿತು. ಹಂಜಾಳಗೆ ನಾಲ್ಕು ಗುಂಡು ತಗುಲಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಹಂಜಾಲಾ ಹತ್ಯೆಯು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗಿದೆ. ಏಕೆಂದರೆ ಆತನನ್ನು ಹಫೀಜ್ ಸಯೀದ್ ನ ಬಲಗೈ ಬಂಟ ಎಂದು ಪರಿಗಣಿಸಲಾಗಿತ್ತು.

ಪಾಕಿಸ್ತಾನದಲ್ಲಿ ಕುಳಿತು ದಾಳಿಗೆ ಸೂಚನೆ
                ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಆದೇಶದ ಮೇರೆಗೆ ಹಂಜಾಲಾ ಅದ್ನಾನ್ ಭಾರತದ ವಿರುದ್ಧ ದಾಳಿ ನಡೆಸಲು ಯೋಜಿಸುತ್ತಿದ್ದನು. ಈತ ಹಲವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನು. ಪಿಒಕೆಯಲ್ಲಿ ಭಯೋತ್ಪಾದಕ ಶಿಬಿರ ನಡೆಸುತ್ತಿದ್ದ ಆರೋಪ ಆತನ ಮೇಲಿದೆ. 2015ರಲ್ಲಿ ಜಮ್ಮುವಿನ ಉಧಂಪುರದಲ್ಲಿ ಬಿಎಸ್‌ಎಫ್ ಬೆಂಗಾವಲು ಪಡೆಯ ಮಾಸ್ಟರ್‌ಮೈಂಡ್‌ ಆಗಿದ್ದವನು ಹಂಜಾಲ. ಪಾಕಿಸ್ತಾನದಲ್ಲಿ ಕುಳಿತು ದಾಳಿಗೆ ಸೂಚನೆ ನೀಡುತ್ತಿದ್ದನು. ಈ ದಾಳಿಯಲ್ಲಿ ಇಬ್ಬರು ಬಿಎಸ್‌ಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ತನಿಖೆಯನ್ನು ಎನ್‌ಐಎ ನಡೆಸುತ್ತಿದೆ. 2015ರ ಆಗಸ್ಟ್‌ 6ರಂದು ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿತ್ತು.

ಪಾಕಿಸ್ತಾನದಲ್ಲಿ ಉಗ್ರರಿಗೆ ನಿದ್ರೆ ಭಂಗ
               ಪಾಕಿಸ್ತಾನದಲ್ಲಿ ಉಗ್ರರು ನಿದ್ದೆ ಕಳೆದುಕೊಂಡಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ದೊಡ್ಡ ದೊಡ್ಡ ಉಗ್ರರು ಹತರಾಗುತ್ತಿದ್ದಾರೆ. ಕಳೆದ ತಿಂಗಳು, ಖೈಬರ್ ಪಖ್ತುಂಖ್ವಾದಲ್ಲಿ ಅಕ್ರಮ್ ಗಾಜಿಯನ್ನು ಕೆಲವು ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು. ಇದಕ್ಕೂ ಮುನ್ನ ಪಠಾಣ್ ಕೋಟ್ ದಾಳಿಯ ಮಾಸ್ಟರ್ ಮೈಂಡ್ ಶಾಹಿದ್ ಲತೀಫ್ ಹತ್ಯೆಯಾಗಿತ್ತು. ಈ ದಾಳಿಗಳು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಬೆಳೆಯುತ್ತಿರುವ ಭಯೋತ್ಪಾದಕರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿವೆ. ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ಸಿಯಾಲ್‌ಕೋಟ್‌ನಲ್ಲಿ ಯಾರನ್ನಾದರೂ ಭೇಟಿಯಾಗಲು ಹೋಗಿದ್ದಾಗ ಹತ್ಯೆ ಮಾಡಲಾಗಿತ್ತು. 2016ರಲ್ಲಿ ಪಠಾಣ್ ಕೋರ್ಟ್ ಏರ್ ಫೋರ್ಸ್ ಸ್ಟೇಷನ್ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದನು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries