ಪತ್ತನಂತಿಟ್ಟ: ಶಬರಿಮಲೆ ಕೀಳ್ಶಾಂತಿ ಅವರ ಸಹಾಯಕ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಕುಂಭಕೋಣಂ ಮೂಲದ ರಾಮ್ ಕುಮಾರ್ (43) ಮೃತ ವ್ಯಕ್ತಿ.
ಘಟನೆಯಿಂದಾಗಿ ಸ್ವಚ್ಛತಾ ಕಾರ್ಯದ ನಂತರ ಇಪ್ಪತ್ತು ನಿಮಿಷ ತಡವಾಗಿ ಗರ್ಭಗೃಹ ತೆರೆಯಲಾಯಿತು.
ಇಂದು ಬೆಳಗ್ಗೆ ಕೊಠಡಿಯಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ರಾಮಕುಮಾರ್ ಪತ್ತೆಯಾಗಿದ್ದಾರೆ. ತಕ್ಷಣ ಸನ್ನಿಧಾನಂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲಾಗಲಿಲ್ಲ. ದೇವಸ್ಥಾನ ತಡವಾಗಿ ತೆರೆದಿದ್ದರಿಂದ ಯಾತ್ರಾರ್ಥಿಗಳು ಬಹಳ ಹೊತ್ತು ಕಾಯಬೇಕಾಯಿತು. ಇಂದು ಕೂಡ ಶಬರಿಮಲೆಗೆ ಭಕ್ತರ ದಂಡೇ ಹರಿದು ಬರುತ್ತಿದೆ.