ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಸರ್ವ ಸಮಿತಿ ಮತ್ತು ಸಂಘ ಸಂಸ್ಥೆಗಳ ವತಿಯಿಂದ ಮವ್ವಾರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ನವೀಕರಣ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ ಗುರುವಾರ ನಡೆಯಿತು.
ಮೊಕ್ತೇಸರ ಪಿ.ಜಿ. ಜಗನ್ನಾಥ ರೈ, ಸೀತಾರಾಮ ನವಕ್ಕಾನ, ಸೇವಾ ಸಮಿತಿ ಪ್ರದಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ,.ಸತೀಶ್ ಪುದ್ಯೋಡು,.ಜೀರ್ಣೋದ್ಧಾರ ಯುವ ಸಮಿತಿ ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಕ್ಷೇತ್ರದ ಅರ್ಚಕ ವೃಂದ, ಸಂಘ-ಸಂಸ್ಥೆಯ ಸದಸ್ಯರು, ಭಕ್ತರು ಪಾಲ್ಗೊಂಡರು.