ಕಾಸರಗೋಡು: ವಿಶ್ವ ಏಡ್ಸ್ ವಿರುದ್ಧ ದಿನಾಚರಣೆಯ ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಡಿ.1ರಂದು ಬೆಳಗ್ಗೆ 9.30ಕ್ಕೆ ಚೆರುವತ್ತೂರು ಗ್ರಾಮ ಪಂಚಾಯಿತಿ ಸಮ್ಮೇಳನ ಸಭಾಂಗಣದಲ್ಲಿ ಜರುಗಲಿದೆ.
ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸುವರು. `ಸಮುದಾಯ ಮುನ್ನಡೆಯಲಿ' ಎಂಬ ಏಡ್ಸ್ ದಿನಾಚರಣೆಯ ಸಂದೇಶ ಆಧರಿಸಿ ಜಿಲ್ಲೆಯ ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜನರಲ್ ಆಸ್ಪತ್ರೆಯಲ್ಲಿ ಕಾರ್ಯಕ್ರಮ:
ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವಿಶ್ವ ಏಡ್ಸ್ ವಿರುದ್ಧ ದಿನಾಚರಣೆ ನಡೆಯಲಿದೆ. ಡಿಸೆಂಬರ್ 1ರಂದು ಬೆಳಗ್ಗೆ 8.30ಕ್ಕೆ ಕೆಂಪು ರಿಬ್ಬನ್ ಧರಿಸಲಾಗುವುದು. ಬೆಳಗ್ಗೆ 9.00 ಗಂಟೆಗೆ ಪೆÇೀಸ್ಟರ್ ಪ್ರದರ್ಶನ ಉದ್ಘಾಟನೆ, ಐ.ಇ.ಸಿವಿತರಣೆ ಮತ್ತು ಜನಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ.ಎಂ ಮುನೀರ್ ಉದ್ಘಾಟಿಸುವರು.
ಕಾಸರಗೋಡು ಜನರಲ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿರುವ ಎಚ್‍ಐವಿ ಚಿಕಿತ್ಸಾ ಕೇಂದ್ರವಾದ 'ಉಷಸ್' ನಲ್ಲಿ ಪ್ರಸಕ್ತ 915 ರೋಗಿಗಳು (464 ಮಹಿಳೆಯರು ಮತ್ತು 451 ಪುರುಷರು) ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಎಆರ್‍ಟಿ (ಆಂಟಿರೆಟ್ರೋವೈರಲ್ ಥೆರಪಿ) ಚಿಕಿತ್ಸೆ ನೀಡಲಾಗುತ್ತಿದೆ. 2023 ರಲ್ಲಿ, ಎಆರ್‍ಟಿ ಕೇಂದ್ರದಲ್ಲಿ 41 ಹೊಸ ಎಚ್‍ಐವಿ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ವಿಶ್ವ ಏಡ್ಸ್ ವಿರುದ್ಧ ದಿನಾಚರಣೆಯ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಎಆರ್‍ಟಿ ಸೆಂಟರ್ ನ ಆಶ್ರಯದಲ್ಲಿ ಜನರಲ್ ಆಸ್ಪತ್ರೆ ಕಾಂಪೌಂಡ್ ನಲ್ಲಿ ಕೆಂಪು ರಿಬ್ಬನ್ ದೀಪ ಬೆಳಗಿಸಲಾಯಿತು. ನೋಡಲ್ ಅಧಿಕಾರಿ ಡಾ. ಜನಾರ್ದನ ನಾಯ್ಕ್ ಉದ್ಘಾಟಿಸಿದರು. ಐಎಂಎ ಜಿಲ್ಲಾ ಸಂಚಾಲಕ ಡಾ. ಬಿ ನಾರಾಯಣ ನಾಯ್ಕ್, ಟಿಬಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾರಾಯಣ ಪ್ರದೀಪ್, ಐಎಂಎ ಜಿಲ್ಲಾಧ್ಯಕ್ಷ ಡಾ. ಜಿತೇಂದ್ರ ರೈ, ಕಾರ್ಯದರ್ಶಿ ಡಾ. ಪ್ರಜ್ಯೋತ್ ಶೆಟ್ಟಿ, ಉಪ ಸಮೂಹ ಮಾಧ್ಯಮ ಅಧಿಕಾರಿ ಎನ್.ಪಿ.ಪ್ರಶಾಂತ್, ಸಿಎಸ್‍ಸಿ ಯೋಜನಾ ನಿರ್ದೇಶಕ ಕುಞÂಕೃಷ್ಣನ್‍ಮೊದಲಾದವರು ಉಪಸ್ಥಿತರಿದ್ದರು.