ಕುಂಬಳೆ: ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅವರ ಪಂಚಾಯತಿ ಯಾತ್ರೆಯ ಭಾಗವಾಗಿ ಪುತ್ತಿಗೆ ಪಂಚಾಯತಿನ ಹಿರಿಯ ಕಾರ್ಯಕರ್ತರನ್ನು, ಸಾಮಾಜಿಕ, ಧಾರ್ಮಿಕ ಮುಂದಾಳಗಳನ್ನು ಶುಕ್ರವಾರ ಭೇಟಿ ಮಾಡಲಾಯಿತು.
ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾರಂಭಗೊಂಡು ಉಪಹಾರವನ್ನು ಸೇವಿಸಿ ಧರ್ಮತಡ್ಕ ನೆರಿಯ ಲಕ್ಷ್ಮೀನಾರಾಯಣ ಭಟ್, ರಾಮಗೌಡ ಗುರುಸ್ವಾಮಿ ಮೇಪೆÇೀಡು, ಬಾಡೂರು ಕಮಲ ಸಿರಿ ಮನೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಚಲನಚಿತ್ರ ವಿಮರ್ಶಕ ಬಾಡೂರು ಎನ್ ಸುಬ್ರಹ್ಮಣ್ಯ, ಮುಗು ಪರಿಸರದಲ್ಲಿ ಪ್ರೇಮ ಬೀರಿಕುಂಜ,ಕಿಶೋರ್ ಅಮೆತ್ತೋಡು, ಬಾಬು ರೈ ಚೇವ, ತ್ಯಾಂಪಣ್ಣ ಭಂಡಾರಿ, ಚಕ್ಕಣಿಕೆ ಬಾಲಸುಬ್ರಮಣ್ಯ ಭಟ್ , ಬಾಲಕೃಷ್ಣ ಭಂಡಾರಿ ಪುತ್ತಿಗೆ ಬೈಲು, ಅನಿಲ್ ಬೆಲ್ಚೆಪಾಡ, ಸೀತಾರಾಮ ಆಳ್ವ ಬೈಲು, ಪುತ್ತಿಗೆ ಶ್ರೀಪತಿ ಭಟ್ ಮುಂಗಿಲ, ಮುಕಾರಿಖಂಡದಲ್ಲಿ ಸುಬ್ಬಪ್ಪ ಗಟ್ಟಿ ಉಪ್ಪಳ್ಳಿಗೆ, ಎಡನಾಡು ಶಂಕರನಾರಾಯಣ ಭಟ್, ಸತ್ಯಶಂಕರ ಅನಂತಪುರ ಮುಂತಾದವರು ಮನೆಗೆ ಭೇಟಿ ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೋಳಾರು ಸತೀಶ್ಚಂದ್ರ ಭಂಡಾರಿ,ರಾಜ್ಯ ಕೌನ್ಸಿಲ್ ಸದಸ್ಯ ವಿ ರವೀಂದ್ರನ್ ಕುಂಬಳೆ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಮಯ್ಯ,ಸ್ವಾಗತ್ ಸೀತಾಂಗೋಳಿ, ಎಸ್.ಟಿ ಮೋರ್ಚಾ ಅಧ್ಯಕ್ಷ ವಿಶ್ವನಾಥ ಜಿ, ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಕಣ್ಣೂರು, ಮಾಧವ ಧರ್ಮತಡ್ಕ, ಅವಿನಾಶ್ ಧರ್ಮತಡ್ಕ ,ಪುತ್ತಿಗೆ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆಚಾರ್ಯ ಬಾಡೂರು, ಭರತ್ ಬಾಡೂರು ,ಕೃಷ್ಣಪ್ರಸಾದ್ ಅಮೆತ್ತೋಡು, ಜಯಂತಿ ಹಳೆಮನೆ, ಹರೀಶ್ ಚೇರಾಲ್ ದಿವಾಕರ ಆಚಾರ್ಯ ಸೀತಾಂಗೋಳಿ, ಶಿವಾನಂದ ಆಚಾರ್ಯ, ಮನೋಹರನ್ ಕಾಮನಬಯಲು ಮುಂತಾದ ಮತ್ತು ಹಲವು ಕಾರ್ಯಕರ್ತರು ಭಾಗವಹಿಸಿದರು. ವಾರ್ಡ್ ಮಟ್ಟದಲ್ಲಿ ಜಿಲ್ಲಾಧ್ಯಕ್ಷರನ್ನು ವಾರ್ಡಿನ ಸಮಿತಿ ಅಧ್ಯಕ್ಷರುಗಳು ಶಾಲು ಹಾಕಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಪಂಚಾಯತ್ ಸಮಿತಿ ಹಾಗೂ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದರು.