ನವದೆಹಲಿ: ಸಂಸದರ ಅಮಾನತು ವಿರುದ್ಧ ಮಂಗಳವಾರ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ: ಸಂಸದರ ಅಮಾನತು ವಿರುದ್ಧ ಮಂಗಳವಾರ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿದ್ದು ವಿವಾದಕ್ಕೆ ಕಾರಣವಾಗಿದೆ.
'ಸಂಸತ್ ಸಂಕೀರ್ಣದಲ್ಲಿ ಗೌರವಾನ್ವಿತ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿದ ರೀತಿ ಕಂಡು ನಾನು ಗಾಬರಿಗೊಂಡಿದ್ದೇನೆ. ಚುನಾಯಿತ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತವಾಗಿದ್ದಾರೆ. ಆದರೆ ಈ ಸ್ವಾತಂತ್ರ್ಯ, ಘನತೆ ಹಾಗೂ ಸೌಜನ್ಯದ ಮಾನದಂಡದ ಮಿತಿಯೊಳಗೆ ಇರಬೇಕು. ಅಂತಹ ಸಂಸದೀಯ ಸಂಪ್ರದಾಯಕ್ಕಾಗಿಯೇ ನಾವು ಹೆಮ್ಮೆಪಟ್ಟುಕೊಳ್ಳುತ್ತೇವೆ. ಅದನ್ನು ಎತ್ತಿ ಹಿಡಿಯುವುದನ್ನೇ ಜನಪ್ರತಿನಿಧಿಗಳಿಂದ ದೇಶದ ಜನತೆಯು ನಿರೀಕ್ಷಿಸುತ್ತಾರೆ' ಎಂದು ಹೇಳಿದ್ದಾರೆ.
ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಧನಕರ್ ಅವರನ್ನು ಅಣಕಿಸುತ್ತಿದ್ದಾಗ ಅದನ್ನು ಬೆಂಬಲಿಸುತ್ತಿದ್ದ ವಿಪಕ್ಷಗಳ ನಡೆ ಬಗ್ಗೆಯೂ ಸರ್ಕಾರದಿಂದ ತೀವ್ರ ಟೀಕೆ ವ್ಯಕ್ತವಾಗಿದೆ.