ಕಾಸರಗೋಡು: ನಗರಸಭೆಯ ಘನ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಾಲೋಚನಾ ಸಭೆ ಜಿಲ್ಲಾಧಿಕಾರಿ ಚೇಂಬರ್‍ನಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಡಬ್ಲ್ಯುಎಂಪಿ ಜಿಲ್ಲಾ ಸಹ ಸಂಯೋಜಕ ಮಿಥುನ್ ಕೃಷ್ಣನ್ ಯೋಜನೆ ಬಗ್ಗೆ ಮಾಹಿತಿ ನಿಡಿದರು.
ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ.ಮುನೀರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಖಾಲಿದ್ ಪಚ್ಚಕ್ಕಾಡ್, ಅಬ್ಬಾಸ್ ಬೇಗಂ, ನಗರಸಭೆ ಕಾರ್ಯದರ್ಶಿ ಪಿ.ಜಸ್ಟಿನ್, ಮಧೂರು ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮೇಶ್ ಗಟ್ಟಿ, ಎಸ್.ರಾಧಾಕೃಷ್ಣ, ಮಧೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕೆ.ಜೆ.ಮನೋಜ್ ಬಾಬು, ಶುಚಿತ್ವ ಮಿಷನ್ ಸಂಯೋಜಕಿ ಎ.ಲಕ್ಷ್ಮಿ, ಕೆಎಸ್‍ಡಬ್ಲ್ಯುಎಂಪಿ ತಜ್ಞರ ಎನ್.ಆರ್.ರಾಜೀವ, ಟಿ.ಎಸ್.ಪರಶಿನ್ ರಾಜ್, ಟಿ.ಜೆ.ಜೇಸನ್, ಕೆ.ಪಿ.ನೀತು ರಾಮ್ ªಮೊದಲಾದವರು ಉಪಸ್ಥಿತರಿದ್ದರು.