ಟೆಲ್ ಅವಿವ್: ಇಸ್ರೇಲ್ ಸೇನೆಯು ಆಕಸ್ಮಿಕವಾಗಿ ತನ್ನದೇ ದೇಶದ ಮೂವರು ಪ್ರಜೆಗಳನ್ನು ಹತ್ಯೆಗೈದಿದೆ.
ಈ ಬಗ್ಗೆ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಮಾಹಿತಿ ನೀಡಿದ್ದಾರೆ. ಇದು ನಮಗೆ ನೋವಿನ ಸಂಗತಿಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು 'ಐಡಿಎಫ್‌ನಿಂದ ದೊಡ್ಡ ಪ್ರಮಾದ ನಡೆದುಹೋಗಿದೆ, ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮನೆಗೆ ಹಿಂದಿರುಗಿಸುವ ಪ್ರಯತ್ನವನ್ನು ಮುಂದುವರೆಸುವುದಾಗಿ' ಹೇಳಿದ್ದಾರೆ.
ಮೃತರನ್ನು ಸಮರ್, ಯೋಟಮ್ ಹೈಮ್ ಮತ್ತು ಅಲೋನ್ ಶಮ್ರಿಜ್ ಎಂದು ಗುರುತಿಸಲಾಗಿದೆ.
ಹಮಾಸ್ ಭದ್ರಕೋಟೆಯಾಗಿರುವ ಗಾಜಾದಲ್ಲಿ ಶೋಧ ಕಾರ್ಯಾಚರಣೆ ವೇಳೆ ಈ ಮೂವರು ಕಂಡುಬಂದಿದ್ದರು. ಇವರು ಭಯೋತ್ಪಾದಕರು ಎಂದು ಇಸ್ರೇಲ್ ಸೇನೆ ತಪ್ಪಾಗಿ ಭಾವಿಸಿ, ಗುಂಡು ಹಾರಿಸಿತ್ತು. ಆದರೆ ಇವರು ಅ.7ರ ದಾಳಿಯಲ್ಲಿ ಹಮಾಸ್ ಬಂಡುಕೋರರ ವಶವಾಗಿದ್ದ ಒತ್ತೆಯಾಳುಗಳಾಗಿದ್ದರು ಎಂದು ನಂತರ ತಿಳಿದುಬಂತು.