ಕಾಸರಗೋಡು: ಮುದ್ರಣ ಮತ್ತು ಪ್ರಕಾಶನ ಸಹಕಾರ ಸಂಘ, ವಿದ್ಯಾನಗರ ವತಿಯಿಂದ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಅವರ ಭಾವಚಿತ್ರ ಅನವರಣ ಕಾರ್ಯಕ್ರಮ ವಿದ್ಯಾನಗರದಲ್ಲಿ ನಡೆಯಿತು. ಊಮನ್ ಚಾಂಡಿ ಅವರ ಪುತ್ರ, ಶಾಸಕ ಚಾಂಡಿ ಊಮ್ಮನ್ ಭಾವಚಿತ್ರ ಅನಾವರಣಗೊಳಿಸಿದರು.
ಸಂಘದ ಅಧ್ಯಕ್ಷ ಸಿ.ವಿ.ಜೇಮ್ಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭ ವಕೀಲ ಮ್ಯಾಥ್ಯೂ ಸೆಬಾಸ್ಟಿಯನ್ ನಾಯ್ಕಂಪರಂಬಿಲ್ ಅವರನ್ನು ಸನ್ಮಾನಿಸಲಾಯಿತು.
ಸಹಾಯಕ ರಿಜಿಸ್ಟ್ರಾರ್ ಎ.ರವೀಂದ್ರ, ಡಿಸಿಸಿ ಮಾಜಿ ಅಧ್ಯಕ್ಷ ಹಕೀಂ ಕುನ್ನಿಲ್, ಸಾಜಿದ್ ಮವ್ವಾಲ್, ಜೋಮೋನ್ ಜೋಸ್, ಎ.ವಾಸುದೇವನ್, ಕೆ.ಭಕ್ತವತ್ಸಲನ್, ದೀಪಕ್, ಸಂಗಮ ನಿರ್ದೇಶಕಿ ಜಮೀಲಾ ಅಹಮದ್, ಬಿ.ಎನ್.ರಾಧಾಕೃಷ್ಣನ್, ಕುಸಲ ಕುಮಾರಿ ಮತ್ತು ಸಿಬ್ಬಂದಿ ಪ್ರತಿನಿಧಿ ಬಿ.ವೆಂಕಟೇಶ್.ಸಂಘದ ಉಪಾಧ್ಯಕ್ಷ ವಕೀಲ ಸೋಜನ್ ಜಿ.ಕುನ್ನೆಲ್ ಸ್ವಾಗತಿಸಿದರು. ಕಾರ್ಯದರ್ಶಿ ಸಿ.ಕವಿತಾ ವಂದಿಸಿದರು.