ಡಿಜಾನ್: ಲಿಂಗತಾರಮ್ಯದ ಆರೋಪ ಹೊತ್ತಿರುವ ಮಿಸ್ ಫ್ರಾನ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಈ ಬಾರಿ ಗಿಡ್ಡ ಕೂದಲಿನ, ಸುಂದರಿ ಈವ್ ಗಿಲ್ಲೆಸ್ ಆಯ್ಕೆಯಾಗಿದ್ದು, ವೀಕ್ಷಕರಿಂದ ನಿರೀಕ್ಷಿಸಿದ್ದ ಟೀಕೆಗಳನ್ನೆಲ್ಲವನ್ನೂ ತನ್ನ 'ವೈವಿಧ್ಯತೆಯ ಗೆಲುವಿನ ಪ್ರಶಂಸೆ'ಯಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದ್ದಾರೆ.
'ನಾವು ಮಹಿಳೆಯ ಸೌಂದರ್ಯವನ್ನು ಉದ್ದ ಕೂದಲಿನೊಂದಿಗೂ ಅಳೆಯುತ್ತೇವೆ. ಆದರೆ, ನಾನು ಗಿಡ್ಡ ಕೂದಲಿನೊಂದಿಗೆ, ಪುರುಷರಂತೆ ತಲೆಗೂದಲು ಕತ್ತರಿಸಿಕೊಂಡು ಕ್ರಾಪ್ ಮಾಡಿದ ರೀತಿಯಲ್ಲಿ ಈ ಸ್ಪರ್ಧೆಯಲ್ಲಿ ಕಾಣಿಸಿಕೊಂಡೆ. ತನ್ನ ಗಿಡ್ಡ ಕೂದಲಿನ 'ವೈವಿಧ್ಯತೆ'ಗೆ ಸಿಕ್ಕ ಜಯವಿದು. ನೀವು ಯಾರೆಂದು ನಿಮ್ಮನ್ನು ಯಾರೂ ನಿರ್ದೇಶಿಸಬಾರದು. ಪ್ರತಿ ಮಹಿಳೆಯು ವಿಭಿನ್ನ. ನಾವೆಲ್ಲರೂ ಅನನ್ಯರು' ಎಂದು ಈವ್ ಗಿಲ್ಲೆಸ್ ಅವರು ಶನಿವಾರ ರಾತ್ರಿ ಮಿಸ್ ಫ್ರಾನ್ಸ್ ಕಿರೀಟ ಮುಡಿಗೇರಿಸಿಕೊಂಡ ನಂತರ ಹೇಳಿದರು.
ಫ್ರಾನ್ಸ್‌ನ ಉತ್ತರ ಭಾಗದ ಡಂಕಿರ್ಕ್ ಬಳಿಯ ಹಳ್ಳಿಯೊಂದರಿಂದ ಬಂದ ಮಹಿಳೆ ಈವ್ ಗಿಲ್ಲೆಸ್. ಡಿಜಾನ್ ನಗರದಲ್ಲಿ ಸುಮಾರು 5,000 ಮಂದಿ ಸೌಂದರ್ಯ ವೀಕ್ಷಕರ ಸಮ್ಮುಖದಲ್ಲಿ ಈ ಸುಂದರಿ ಮಿಸ್ ಫ್ರಾನ್ಸ್ ಆಗಿ ಆಯ್ಕೆಯಾದರು. ವಿಜೇತರ ಆಯ್ಕೆಗೆ ವೀಕ್ಷಕರಿಂದ ಅರ್ಧದಷ್ಟು ಮತ್ತು ಏಳು ಮಂದಿ ಮಹಿಳಾ ತೀರ್ಪುಗಾರರಿಂದ ಇನ್ನರ್ಧದಷ್ಟು ಅಂಕಗಳನ್ನು ಪರಿಗಣಿಸಲಾಯಿತು.
ಈವ್ ಗಿಲ್ಲೆಸ್ ಅವರ ಆಯ್ಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ವೀಕ್ಷಕರು ಸಂತೋಷ ವ್ಯಕ್ತಪಡಿಸಿ, ಪ್ರಶಂಸಿಸಿದ್ದಾರೆ. ಈವ್ ಅವರ ಆಯ್ಕೆಯನ್ನು ರಾಜಕೀಯಗೊಳಿಸಲಾಗಿದೆ ಎಂದು ಬಿಂಬಿಸುತ್ತಿರುವ ಟೀಕಾಕಾರರ ವಿರುದ್ಧವೂ ಬಹಳಷ್ಟು ವೀಕ್ಷಕರು ಕಿಡಿಕಾರಿದ್ದಾರೆ.
ಈವ್ ಗಿಲ್ಲೆಸ್