ಮಂಜೇಶ್ವರ: ಕೇಂದ್ರದ ಯೋಜನೆಗಳು ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ. ಎಲ್ಲಾ ಯೋಜನೆಗಳು ದೇಶದ ಪ್ರತಿ ನಾಗರಿಕರಿಗೂ ತಲುಪುವಲ್ಲಿ ಯಶಸ್ವಿಯಾಗುತ್ತಿದ್ದು, ಫಲಾನುಭವಿಗಳಲ್ಲಿ ಮತೀಯ ಓಲೈಕೆ, ತರತಮ್ಯತೆಗಳಿಲ್ಲದೆ, ಭ್ರಷ್ಟಾಚಾರ ರಹಿತ ಪಾರದರ್ಶಕ ಯೋಜನೆಗಳು ಮೋದಿಜಿ ಯನ್ನು ಮತ್ತೆ ದೇಶದ ಪ್ರಧಾನಿಯಾಗಲಿರುವ ಮಾನ್ಯತೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ. ಕೆ ಶ್ರೀಕಾಂತ್ ಹೇಳಿದರು.
ಬಿಜೆಪಿ ಮಿಂಜ ಪಂಚಾಯತಿ ವತಿಯಿಂದ ಮೀಯಪದವು ಪೇಟೆಯಲ್ಲಿ ಶುಕ್ರವಾರ ಜರಗಿದ ‘ಜನ ಪಂಚಾಯತ್’ ಕಾರ್ಯಕ್ರಮ ಹಾಗೂ ಕೆ.ಟಿ. ಜಯಕೃಷ್ಣ ಮಾಸ್ತರ್ ‘ಬಲಿದಾನ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪದ್ಮನಾಭ ರೈ ಅಧ್ಯಕ್ಷತೆ ವಹಿಸಿದ್ದರು,. ಮಂಡಲಾಧ್ಯಕ್ಷ ಆದರ್ಶ್ ಬಿ.ಎಂ., ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಣಿಕಂಠ ರೈ ಪಟ್ಲ, ಅಶ್ವಿನಿ ಪಜ್ವ, ನಾರಾಯಣ ನಾಯ್ಕ್, ಕೃಷ್ಣ ನಾವುಡ, ಕಳ್ಳಿಗೆ ಸದಾನಂದ, ರಂಜಿತ್, ಶಾಲಿನಿ, ಮೋಹನ್, ಸತೀಶ, ಆಶಾಲತಾ, ಕೆ.ವಿ. ಭಟ್, ದಾಮೋದರ,ಎಸ್., ನಾರಾಯಣ ಮುಂದಿಲ, ಸಂತೋಷ್ ದೈಗೋಳಿ ಉಪಸ್ಥಿತರಿದ್ದರು. ಕರುಣಾಕರ ರೈ ಸ್ವಾಗತಿಸಿ, ಚಂದ್ರಹಾಸ ಕಡಂಬಾರ್ ವಂದಿಸಿದರು.