ಉಪ್ಪಳ: ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ ಎಂಬ ಯೋಜನೆ ಅಂಗವಾಗಿ ಬಾಯಾರು ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯೆ ಸರೋಜ ಪೆರ್ಪೊಡಿ ಬೆರಿಪದವು ಅವರಿಗೆ ಧನಸಹಾಯ ಹಸ್ತಾಂತರಿಸಲಾಯಿತು. ಅವರ ಪತಿ ನಾಗೇಶ್ ಭಟ್ ಪೆರ್ವೋಡಿ ಇತ್ತೀಚೆಗೆ ರಸ್ತೆ ಅಫಘಾತಕ್ಕೊಳಗಾಗಿ ನಿಧನರಾಗಿದ್ದು ರೂ.50,000ದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಬಾಲಕೃಷ್ಣ ರೈ ಬಾನೊಟ್ಟು ವಿತರಿಸಿದರು. ಕ್ಯಾಂಪೆÇ್ಕೀ ಸಂಸ್ಥೆಯ ನಿರ್ದೇಶಕ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕ್ಯಾಂಪ್ಕೋ ಹಿರಿಯ ಪ್ರಬಂಧಕ ಗಿರೀಶ್. ಇ, ಬಾಯಾರು ಶಾಖೆಯ ಪ್ರಬಂಧಕ ರಮೇಶ್ ವೈ ಜೊತೆಗಿದ್ದರು.