ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಜ್ಞಾನ ಶಕ್ತಿ ಸುಬ್ರಮಣ್ಯೇಶ್ವರ ಕ್ಷೇತ್ರ ಪಾವಂಜೆ ಶ್ರೀ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಲೀಲಾ ಮೂರ್ತಿ ಶ್ರೀ ಕೃಷ್ಣ ಯಕ್ಷಗಾನ ಬಯಲಾಟ ಜರಗಿತು.ಈ ಸಂದರ್ಭದಲ್ಲಿ ಯಕ್ಷಮಿತ್ರರು ಪಟ್ಲ ಅಭಿಮಾನಿ ಬಳಗದ ವತಿಯಿಂದ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಕ್ಷೇತ್ರದ ಮೊಕ್ತೇಸರ ಪಿ.ಜಿ. ಜಗನ್ನಾಥ ರೈ ಶಾಲು ಹೊದಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮತ್ತು ಯಕ್ಪ ಮಿತ್ರರು-ಪಟ್ಲ ಅಭಿಮಾನಿ ಬಳಗದ ಸಂಚಾಲಕ ನಿರಂಜನ್ ರೈ ಪೆರಡಾಲ ಮತ್ತು ರಾಘವೇಂದ್ರ ಪ್ರಸಾದ್ ಬದಿಯಡ್ಕ ಸ್ಮರಣಿಕೆ ನೀಡಿದರು. ಕ್ಷೇತ್ರದ ಮಾಜಿ ಮೊಕ್ತೇಸರ ಪಿ.ಜಿ. ಚಂದ್ರಹಾಸ ರೈ, ಕೃಷ್ಣ ಭಟ್ .ಪುದ್ಯೋಡು, ನಿವೃತ್ತ ಕೇರಳ ಬ್ಯಾಂಕ್ ಪ್ರಬಂಧಕ ಕುಂಞಣ್ಣ, ಪುರುμÉೂೀತ್ತಮ ಆಚಾರ್ಯ, ಯೋಗೀಶ್ ಪೆರಡಾಲ, ಉಪಸ್ಥಿತರಿದ್ದರು. ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ವಂದಿಸಿದರು.