ಮುಳ್ಳೇರಿಯ: ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಸಮರಸ ಟ್ರಸ್ಟ್ ಮುಳ್ಳೇರಿಯದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ಜರಗಿತು.
ಸಮರಸ ಟ್ರಸ್ಟ್ ಅಧ್ಯಕ್ಷ ಡಾ. ವಿ.ವಿ. ರಮಣ, ಮುಳ್ಳೇರಿಯ ಮಂಡಲ ಗುರಿಕ್ಕಾರ ಮೊಗ್ರ ಸತ್ಯನಾರಾಯಣ ಭಟ್, ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು ಜೊತೆಗೂಡಿ ಶಂಕುಸ್ಥಾಪನೆ, ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ವೇದಮೂರ್ತಿ ಪಯ ಶ್ಯಾಮ ಭಟ್ ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಮುಳ್ಳೇರಿಯ ಬದಿಯಡ್ಕ ರಸ್ತೆಗೆ ಹೊಂದಿಕೊಂಡಿರುವ ಸಮರಸ ಕಟ್ಟಡದ ಸ್ಥಳದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಂಡಲ ಗುರಿಕ್ಕಾರ ಮೊಗ್ರ ಸತ್ಯನಾರಾಯಣ ಭಟ್ ಮಾತನಾಡಿ, ನಿಶ್ಚಿತ ಗುರಿಯನ್ನು ಇಟ್ಟು ಗುರುವನುಗ್ರಹದೊಂದಿಗೆ ಮುಂದುವರಿದಾಗ ಆ ಕಾರ್ಯವು ನಿರ್ವಿಘ್ನವಾಗಿ ನೆರವೇರುತ್ತದೆ. ನಿರ್ಮಾಣಗೊಳ್ಳಲಿರುವ ಕಟ್ಟಡವು ಸಮಾಜದ ಬೆಳವಣಿಗೆಗೆ, ವಿವಿಧ ಚಟುವಟಿಕೆಗಳಿಗೆ ಪೂರಕವಾಗಿ ಬೆಳಗಲಿ ಎಂದರು. ಬೆಳಗ್ಗೆ ಗಣಪತಿ ಹೋಮ, ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಾಲಸುಬ್ರಹ್ಮಣ್ಯ ಸರ್ಪಮಲೆ, ಗೋವಿಂದ ಬಳ್ಳಮೂಲೆ, ಈಶ್ವರಿ ಬೇರ್ಕಡವು, ಕೆ.ಎನ್.ಭಟ್ ಬೆಳ್ಳಿಗೆ, ಡಾ. ಶಿವಕುಮಾರ ಅಡ್ಕ, ರಾಜಗೋಪಾಲ ಕೈಪಂಗಳ, ಶಿವರಾಮ ಭಟ್ ಅಂಬೆಮೂಲೆ, ನವನೀತ ಪ್ರಿಯ ಕೈಪಂಗಳ, ಗೀತಾಲಕ್ಷ್ಮೀ ಮುಳ್ಳೇರಿಯ, ಶ್ರೀಮಠದ ಶಿಷ್ಯಂದಿರು ಪಾಲ್ಗೊಂಡಿದ್ದರು.