ಮಂಜೇಶ್ವರ: ವರ್ಕಾಡಿ ಪಂಚಾಯಿತಿಯ ದೈಗೋಳಿಯಲ್ಲಿ ಅಂಗಡಿಗಳಿಂದ ಸರಣಿ ಕಳವು ನಡೆದಿದ್ದು, ಕಳ್ಳರ ಚಲನವಲನಗಳು ಸನಿಹದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ನಾಸರ್ ಎಂಬವರ ಮಾಳಿಕತ್ವದ ಚಿಕನ್ ಸ್ಟಾಲ್, ಮುನೀರ್ ಎಂಬವರ ತರಕಾರಿ ಅಂಗಡಿ, ಮುಸ್ತಪಾ ಎಂಬವರ ಮಾಳಿಕತ್ವದ ಹೋಟೆಲ್‍ನಿಂದ ಕಳವು ನಡೆಸಲಾಗಿದೆ.ಚಿಕನ್ ಸಟಾಲ್ ಹಾಗೂ ತರಕಾರಿ ಅಂಗಡಿಯಲ್ಲಿರಿಸಿದ್ದ ಕಾಣಿಕೆ ಡಬ್ಬದಿಂದ ನಗದು ಹಾಗೂ ಹೋಟೆಲ್‍ನ ಡ್ರಾಯರ್‍ನಿಂದ ನಗದು ಕಳವುಗೈಯಲಾಗಿದೆ. ಅಂಗಡಿ ಮುಂಭಾಗದಲ್ಲಿ ಕಳ್ಳರು ಸುತ್ತಾಡುತ್ತಿರುವುದು ಹಾಗೂ ಶಟರ್ ಎತ್ತುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.