ಕಾಸರಗೋಡು: ಬಿಜೆಪಿ ಕಾಸರಗೋಡು ನಗರಸಭಾ ಸಮಿತಿಯ ಆಶ್ರಯದಲ್ಲಿ 'ಎನ್‍ಡಿಎ ಜನ ಪಂಚಾಯತ್ ಸಭೆ' ಕಾಸರಗೋಡಿನಲ್ಲಿ ಜರುಗಿತು. ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಪ. ಪ್ರಕಾಶ್ ಬಾಬು ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಯೋಜನೆಗಳು ದೇಶದ ಜನತೆಯನ್ನು ಸದೃಢಗೊಳಿಸಿದೆ. ಕೇಂದ್ರದ ಜನಪರ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಳಮಟ್ಟದ ಜನತೆಗೆ ತಲುಪಿಸಲು ಕಾರ್ಯಕರ್ತರು ತಯಾರಾಗಬೇಕು. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದ್ದು, ರಾಜ್ಯ ಆರ್ಥಿಕ ದೀವಾಳಿಯತ್ತ ಸಾಗುವಂತಾಗಿದೆ ಎಂದು ತಿಳಿಸಿದರು.
ಬಿಜೆಪಿ ನಗರಸಭಾ ಪಶ್ಚಿಮ ಸಮಿತಿ ಅಧ್ಯಕ್ಷ ಎ. ಪ್ರೇಮಜಿತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ಜಿಲ್ಲಾ ಸಮಿತಿ ಕಾರ್ಯದರ್ಶಿ ಉಮಾ ಕಡಪ್ಪುರ, ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್, ಮಂಡಲ ಸಮಿತಿ ಕಾರ್ಯದರ್ಶಿ ಸುಕುಮಾರ್ ಕುದ್ರೆಪ್ಪಾಡಿ, ಮುಖಂಡರಾದ ವರಪ್ರಸಾದ್ ಕೋಟೆಕಣಿ, ಎನ್. ಮಧು ಉಪಸ್ಥಿತರಿದ್ದರು. ಬಿಜೆಪಿ ನಗರಸಭಾ ಸಮಿತಿ ಪಶ್ಚಿಮ ಸಮಿತಿ ಕಾರ್ಯದರ್ಶಿ ಕೆ. ಕಿಶೋರ್ ಕುಮಾರ್ ಸ್ವಾಗತಿಸಿದರು. ಕೆ. ಜಿ. ಮನೋಹರನ್ ವಂದಿಸಿದರು.