ನವದೆಹಲಿ :ಡಬ್ಲ್ಯುಎಫ್‌ಐ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದ ಕೇಂದ್ರ ಸಕಾರದ ನಿರ್ಧಾರವನ್ನು ತಾನು ಸ್ವಾಗತಿಸುವುದಾಗಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ. ಆದರೆ ಈ ಅಮಾನತು ಆದೇಶದಲ್ಲಿ ಯಾವುದೇ ಸ್ಪಷ್ಟತೆಯಿಲ್ಲವೆಂದು ಅವರು ಹೇಳಿದ್ದಾರೆ.

ಕುಸ್ತಿ ಕ್ರೀಡೆಯಿಂದ ನಿವೃತ್ತಿಗೊಳ್ಲುವ ತನ್ನ ನಿರ್ಧಾರವನ್ನು ಬದಲಾಯಿಸು ಸಾಧ್ಯತೆಯ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ.ಫೆಡರೇಶನ್ ನೂತನವಾಗಿ ಪುನಾರಚನೆಯಾದ ಬಳಿಕವಷ್ಟೇ ಈ ಬಗ್ಗೆ ತನ್ನ ನಿರ್ಧಾರವನ್ನು ತಿಳಿಸುವುದಾಗಿ ಸಾಕ್ಷಿ ಹೇಳಿದ್ದಾರೆ.
ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಸಂಜಯ್ ಸಿಂಗ್ ಆಯ್ಕೆಯನ್ನು ಪ್ರತಿಭಟಿಸಿ ಸಾಕ್ಷಿ ಮಲಿಕ್ ಅವರು ಗುರುವಾರ ಕುಸ್ತಿ ಕ್ರೀಡೆಗೆ ತನ್ನ ನಿವೃತ್ತಿಯನ್ನು ಘೋಷಿಸಿದ್ದರು.
''ಅಮಾನತು ಆದೇಶವನ್ನು ಲಿಖಿತ ರೂಪದಲ್ಲಿ ತಾನು ನೋಡಿಲ್ಲ. ಕೇವಲ ಸಂಜಯ್ ಸಿಂಗ್ ಅವರೊಬ್ಬರನ್ನೇ ಅಥವಾ ಸಮಗ್ರ ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸಲಾಗಿದೆಯೇ ಎಂಬುದು ನನಗೆ ತಿಳಿದಿಲ್ಲ. ನಮ್ಮ ಹೋರಾಟವು ಸರಕಾರದ ವಿರುದ್ಧವಲ್ಲ. ಮಹಿಳಾ ಕುಸ್ತಿಪಟುಗಳಾಗಿ ನಮ್ಮ ಹೋರಾಟದ ಸಂದರ್ಭ ನನ್ನ ನಿವೃತ್ತಿಯನ್ನು ಘೋಷಿಸಿದ್ದೇನೆ. ಉದಯೋನ್ಮುಖ ಕುಸ್ತಿಪಟುಗಳಿಗೆ ನ್ಯಾಯದೊರೆಯಬೇಕೆಂದು ನಾನು ಬಯಸುತ್ತೇನೆ''ಎಂದರು.