ಲಂಡನ್: ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಆಡಳಿತರೂಢ ಕನ್ಸರ್‌ವೇಟಿವ್ ಪಕ್ಷವು, ವಲಸಿಗರ ಪ್ರಮಾಣವನ್ನು ತಗ್ಗಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಲಂಡನ್: ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಆಡಳಿತರೂಢ ಕನ್ಸರ್‌ವೇಟಿವ್ ಪಕ್ಷವು, ವಲಸಿಗರ ಪ್ರಮಾಣವನ್ನು ತಗ್ಗಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.
ಈ ಕುರಿತು 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 'ದೇಶದಲ್ಲಿ ವಲಸೆ ಪ್ರಮಾಣ ತುಂಬಾ ಹೆಚ್ಚಾಗಿದೆ.
ವಲಸೆ ನಿಯಂತ್ರಿಸಲು ಕ್ರಮ ಜರುಗಿಸುವುದಾಗಿ ಘೋಷಿಸಿದ್ದೇವೆ. ಅದರಂತೆಯೇ ನಾನು ಹಲವು ನಿಯಮಗಳನ್ನು ಜಾರಿ ಮಾಡಲು ನಿರ್ಧರಿಸಿದ್ದೇನೆ. ಇತಿಹಾಸದಲ್ಲಿ ಈ ಹಿಂದೆ ಯಾವ ಪ್ರಧಾನಿಯೂ ಈ ರೀತಿ ಮಾಡಿಲ್ಲ ಎಂದು ರಿಷಿ ಸುನಕ್ ತಿಳಿಸಿದ್ದಾರೆ.
ಉದ್ಯೋಗಿಗಳ ವೀಸಾಕ್ಕಾಗಿ ಕನಿಷ್ಠ ವೇತನದ ಮಿತಿಯನ್ನು ಹೆಚ್ಚಿಸುವುದಾಗಿ ಬ್ರಿಟನ್ ಸರ್ಕಾರ ಘೋಷಿಸಿದೆ. ಇದರಿಂದಾಗಿ ಸಾಗರೋತ್ತರ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಸಿಬ್ಬಂದಿಯ ಅವಲಂಬಿತರನ್ನು ಬ್ರಿಟನ್‌ಗೆ ಕರೆತರುವುದನ್ನು ತಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಸ್ತಾಪಗಳು ಕಾನೂನುಬದ್ಧವಾದ ವಲಸೆ ಸಂಬಂಧಿತ ನಿರ್ಬಂಧನೆಗಳಾಗಿವೆ ಎಂದು ರಿಷಿ ಸುನಕ್ ಅವರ ಕಚೇರಿ ತಿಳಿಸಿದೆ.
2025ರ ಜನವರಿಯಲ್ಲಿ ಬ್ರಿಟನ್ ಸಾರ್ವತ್ರಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ವಲಸೆ ವಿಚಾರ ಪ್ರಮುಖ ಪಾತ್ರವಹಿಸಲಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಿಷಿ ಸುನಕ್ ವಿರುದ್ಧ ಸಮರ ಸಾರಲು ಲೇಬರ್ ಪಕ್ಷವು ಸಜ್ಜಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷ ಬ್ರಿಟನ್‌ಗೆ ಆಗಮಿಸಿದವರ ಸಂಖ್ಯೆಯು ತೊರೆದವರ ಸಂಖ್ಯೆಗಿಂತ ಹೆಚ್ಚಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ (ಒಎನ್‌ಎಸ್) ತಿಳಿಸಿದೆ.