ಬದಿಯಡ್ಕ: ನೀರ್ಚಾಲಿನ ಶಾಲೆಯೊಂದರ ಮಧ್ಯಾಹ್ನದೂಟಕ್ಕೆ ಕೆಸುವಿನ ಗಡ್ಡೆಯಿಂದ ತಯಾರಿಸಿದ ಪದಾರ್ಥ ಸೇವಿಸಿದ ವಿದ್ಯಾರ್ಥಿಗಳಲ್ಲಿ ತುರಿಕೆ ಅನುಭವವುಂಟಾಗಿದ್ದು, ಮಕ್ಕಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಗುರುವಾರ ಮಧ್ಯಾಹ್ನ ಪದಾರ್ಥದೊಂದಿಗೆ ಊಟ ಸೇವಿಸಿದ ಮಕ್ಕಳಲ್ಲಿ ತುರಿಕೆ ಕಂಡುಬಂದಿದ್ದು, ವಿದ್ಯಾರ್ಥಿಗಳ ಹೆತ್ತವರು ಆಗಮಿಸಿ ಮಕ್ಕಳನ್ನು ಚಿಕಿತ್ಸೆಗೆ ಕರೆದೊಯ್ದಿದ್ದರು. ಆದರೆ ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಿಲ್ಲ ಎಂಬ ದೂರೂ ಹೆತ್ತವರ ಕಡೆಯಿಂದ ಕೇಳಿ ಬಂದಿತ್ತು. ಗಂಭೀರ ಪರಿಣಾಮ ಯಾರ ಮೇಲೂ ಆಗಿಲ್ಲ. ಹಲವು ಮಕ್ಕಳಿಗೆ ತುರಿಕೆ, ಮೈದದ್ದು ಕಂಡುಬಂದಿದ್ದು, ಕ್ಲಪ್ತ ಸಮಯದ ಚಿಕಿತ್ಸೆಯಿಂದ ಬಹುತೇಕರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.