ತಿರುವನಂತಪುರ: ಸಿಪಿಎಂ ನಾಯಕಿ ಟಿಎನ್ ಸೀಮಾ ಅವರ ಪತಿ ಜಿ. ಜಯರಾಜ್ ಅವರನ್ನು ಸಿ.ಡಿ.ಟಿ ನಿರ್ದೇಶಕರಾಗಿ ಮರುನೇಮಕಗೊಳಿಸಲು ಸರ್ಕಾರ ತಂದಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಎರಡನೇ ಪಿಣರಾಯಿ ಸರ್ಕಾರವು ನಿರ್ದೇಶಕರ ಹುದ್ದೆಗೆ ನೇಮಕಾತಿಗೆ ಅರ್ಹತೆಗಳನ್ನು ಬದಲಾಯಿಸಿತು. ಇದನ್ನು ಪ್ರಶ್ನಿಸಿ ಸಿಡಿಐಟಿ ಉಪ ನಿರ್ದೇಶಕ ಎಂ.ಆರ್.ಮೋಹನಚಂದ್ರನ್ ಸಲ್ಲಿಸಿದ್ದ ಅರ್ಜಿಯಲ್ಲಿ ಏಕ ಪೀಠದ ಆದೇಶ ಬಂದಿದೆ.
ಶಿಕ್ಷಣ, ವಿಜ್ಞಾನ ಮತ್ತು ಸಮೂಹ ಸಂವಹನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ನೇಮಕ ಮಾಡಬೇಕೆಂಬುದು ಹಿಂದಿನ ಶಿಫಾರಸು. ಇದನ್ನು ಬದಲಾಯಿಸಿ ಸೇವೆಯಿಂದ ನಿವೃತ್ತರಾದವರನ್ನೂ ನೇಮಕ ಮಾಡಿಕೊಳ್ಳಬಹುದು ಎಂಬ ನಿಬಂಧನೆ ರೂಪಿಸಲಾಗಿತ್ತು. ಜಯರಾಜ್ ಗಾಗಿ ಷರತ್ತುಗಳನ್ನು ಬದಲಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅಧಿಸೂಚನೆ ರದ್ದತಿಯಿಂದ ಜಯರಾಜ್ ಅವರ ನೇಮಕವೂ ಅಸಿಂಧುವಾಯಿತು.
ನ್ಯಾಯಾಲಯದ ಮೆಟ್ಟಿಲೇರಿದಾಗ ಹಿಂದಿನ ನೇಮಕಾತಿಯನ್ನು ಸರ್ಕಾರ ರದ್ದುಗೊಳಿಸಿತ್ತು. ನಂತರ ಎರಡನೇ ಪಿಣರಾಯಿ ಸರ್ಕಾರ ವಿದ್ಯಾರ್ಹತೆ ಬದಲಿಸಿ ಜಯರಾಜ್ ಅವರನ್ನು ನೇಮಿಸಿತು.