ಎರ್ನಾಕುಳಂ: ಕ್ಯೂಸ್ಯಾಟ್ ಅಪಘಾತಕ್ಕೆ ಸಂಬಂಧಿಸಿದಂತೆ ಸ್ಕೂಲ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ದೀಪಕ್ ಕುಮಾರ್ ಸಾಹು ಅವರು ಘಟನೆಯ ಹೊಣೆ ರಿಜಿಸ್ಟಾರ್ ಅವರದ್ದು ಎಂದು ತಿಳಿಸಿದ್ದಾರೆ.
ಅವರು ಅಫಿಡವಿಟ್‍ನ ತಮ್ಮ ಉತ್ತರದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.ಕುಸ್ಯಾಟ್ ರಿಜಿಸ್ಟ್ರಾರ್ ಅವರ ಅಧೀನದಲ್ಲಿರುವ ಸ್ಥಳದಲ್ಲಿ ಕಾರ್ಯಕ್ರಮ ನಡೆದಿದ್ದು, ಪತ್ರಗಳ ಮೂಲಕ ಮತ್ತು ಖುದ್ದಾಗಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ಅಫಿಡವಿಟ್‍ನಲ್ಲಿ ತಿಳಿಸಲಾಗಿತ್ತು ಎಂದಿದ್ದಾರೆ.
ಸಮರ್ಪಕ ಅನುಷ್ಠಾನದಲ್ಲಿ ಲೋಪವಾಗಿದ್ದು, ಅನಾಹುತಕ್ಕೆ ರಿಜಿಸ್ಟ್ರಾರ್ ಹೊಣೆ ಎಂದು ದೀಪಕ್ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು. ರಿಜಿಸ್ಟ್ರಾರ್ ಹೇಳಿಕೆಯನ್ನು ಪಡೆಯಲು ಪೆÇಲೀಸರು ಸಿದ್ಧರಿಲ್ಲ ಎಂದು ಉತ್ತರಿಸಿದ ಅಫಿಡವಿಟ್‍ನಲ್ಲಿ ತಿಳಿಸಲಾಗಿದೆ. ಸ್ಕೂಲ್ ಆಫ್ ಇಂಜಿನಿಯರಿಂಗ್‍ನ ಪ್ರಾಂಶುಪಾಲ ಹುದ್ದೆಯಿಂದ ತನ್ನನ್ನು ತೆಗೆದುಹಾಕಿರುವುದು ತಪ್ಪು ಕ್ರಮ ಎಂದು ಅಫಿಡವಿಟ್‍ನಲ್ಲಿ ಉಲ್ಲೇಖಿಸಲಾಗಿದೆ.