ಕಾಸರಗೋಡು: ಜಿಲ್ಲಾ ವಾರ್ತಾ ಮತ್ತು ಮಾಹಿತಿ ಇಲಾಖೆ ಕಚೇರಿಗೆ ಗುತ್ತಿಗೆ ಆಧಾರದಲ್ಲಿ ಡ್ರೋನ್ ಆಪರೇಟರ್‍ಗಳ ಪ್ಯಾನೆಲ್ ರಚಿಸುವ ನಿಟ್ಟಿನಲ್ಲಿ ಅರ್ಹತೆಯಿರುವ ವ್ಯಕ್ತಿ, ಸಂಸ್ಥೆ ಯಾ ಸ್ಟಾರ್ಟ್‍ಅಪ್‍ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಡ್ರೋನ್ ಕಾರ್ಯಾಚರಿಸಿ ಫೆÇೀಟೋ ಮತ್ತು ವೀಡಿಯೊ ಶೂಟಿಂಗ್ ನಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ಅಥವಾ ಸಂಘಟನೆಯಿಂದ ಮೂರು ವರ್ಷಗಳಿಗಿಂತಲೂ ಕಡಿಮೆಯಿಲ್ಲದ ಕೆಲಸದ ಅನುಭವ ಹೊಂದಿರಬೇಕು. ಸಂಘಟನೆಗಳು ಮತ್ತು ಸಂಸ್ಥೆಗಳಾಗಿದ್ದಲ್ಲಿ, ಇಂತಹ ಕೆಲಸ ಕೈಗೊಂಡು ನಡೆಸಿದ ಮೂರು ವರ್ಷಗಳ ಅನುಭವ ಹೊಂದಿರಬೇಕು. ಸುದ್ದಿ ಮಾಧ್ಯಮಕ್ಕಾಗಿ ಏರಿಯಲ್ ನ್ಯೂಸ್ ಕ್ಲಿಪ್‍ಗಳ ಚಿತ್ರೀಕರಣ ಮತ್ತು ಎಡಿಟಿಂಗ್ ಮಾಡಿದ ಅನುಭವಕ್ಕೆ ಆದ್ಯತೆ ನೀಡಲಾಗುತ್ತದೆ. ಅರ್ಜಿಯ ಜೊತೆ ಬಯೋಡಾಟಾ, ವಿದ್ಯಾರ್ಹತೆ, ಕೆಲಸದ ಅನುಭವ, ಅರ್ಧ ಗಂಟೆ ಚಿತ್ರೀಕರಣ ಮತ್ತು ಒಂದು ಗಂಟೆ ಚಿತ್ರೀಕರಣದ ದರಗಳ ವಿವರವಾದ ಪ್ರಸ್ತಾವನೆಯೊಂದಿಗೆ ಡಿಸೆಂಬರ್ 31ರಂದು ಸಂಜೆ 5ರೊಳಗೆ ಕಲೆಕ್ಟರೇಟಿನ ಜಿಲ್ಲಾ ಇನ್‍ಫರ್ಮೇಷನ್ ಆಫೀಸ್‍ಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಠಿಡಿಜ.ಞeಡಿಚಿಟಚಿ.gov.iಟಿ ನಲ್ಲಿ ಲಭ್ಯವಿರುವುದಾಗಿ ಪ್ರಕಟಣೆ ತಿಳಿಸಿದೆ.