ನೆಲನೆಲ್ಲಿ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ಸಸ್ಯವಾಗಿದೆ. ಪ್ರಾಚೀನರು ಈ ಸಸ್ಯದ ಪ್ರಯೋಜನಗಳನ್ನು ಅರಿತು ಬಳಸುತ್ತಿದ್ದರು. ಅದರ ಎಲೆಗಳಿಂದ ಬೇರುಗಳವರೆಗೆ ತಿಳಿದಿದ್ದರು.
ಆದರೆ ಕಾಲ ಕಳೆದಂತೆ ಹೊಸ ಪೀಳಿಗೆಗೆ ಇಂತಹ ಔಷಧೀಯ ಗುಣಗಳು ಯಾವ ಸಸ್ಯಗಳಲ್ಲಿವೆ ಎಂಬುದು ತಿಳಿಯುತ್ತಿಲ್ಲ. ನೆಲ ನೆಲ್ಲಿ ಅಂತಹ ಒಂದು ವಿಶೇಷ ಮೌಲ್ಯದ ಸಸ್ಯವಾಗಿದೆ. ಹೊಟ್ಟೆಯ ಕಾಯಿಲೆಗಳ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವ ನೆಲ ನೆಲ್ಲಿಯ ಪ್ರಯೋಜನಗಳು ವಿಶಾಲ, ವಿಸ್ಕøತ.
ನೆಲ ನೆಲ್ಲಿ ಯಕೃತ್ತಿನ ರೋಗಗಳನ್ನು ತಡೆಗಟ್ಟಲು ಒಳ್ಳೆಯದು. ಯಕೃತ್ತಿನ ಕಾಯಿಲೆ ಮತ್ತು ಕಾಮಾಲೆ ವಿರುದ್ಧ ಹೋರಾಡಲು ಇದನ್ನು ಸ್ವಚ್ಛವಾಗಿ ತೊಳೆದು, ಬೇರನ್ನು ಹಾಲು ಅಥವಾ ತೆಂಗಿನ ಹಾಲಿನಲ್ಲಿ ಪುಡಿಮಾಡಿ ಮತ್ತು ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಬಹುದು. ಈ ಗಿಡದ ಎಲೆಗಳನ್ನು ದಿನಾಲೂ ಜಗಿಯುವುದರಿಂದ ಹಲ್ಲು ಹುಳುಕಾಗುವುದನ್ನು ತಡೆಯಲು ತುಂಬಾ ಸಹಕಾರಿ. ನೆಲ ನೆಲ್ಲಿಯನ್ನು ಆಯುರ್ವೇದದಲ್ಲಿ ಮೂತ್ರನಾಳದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ದೇಹದಲ್ಲಿನ ಹುಣ್ಣುಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಕೂದಲು ಉದುರುವುದನ್ನು ತಡೆಯಲು ನೆಲ ನೆಲ್ಲಿ ಒಳ್ಳೆಯದು. ಇದರ ಬೇರನ್ನು ಅರೆದು ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಬೆಳವಣಿಗೆಯಾಗುತ್ತದೆ.
ಇವಿಷ್ಟೇ ಅಲ್ಲದೆ ಇನ್ನಷ್ಟು ವಿಶೇಷ ಗುಣಗಳೂ ಈ ನೆಲನೆಲ್ಲಿಗಿದೆ. ನಮ್ಮ ಪರಿಸರದ, ಪರಿಚಯದ ಹಿರಿಯರಿಂದ ಕೇಳಿ ದಾಖಲಿಸುವುದು ಮತ್ತು ಪ್ರಚುರಪಡಿಸಿವುದೂ ಇಂದು ಅಗತ್ಯವಿದೆ. ನಿಮಗೆ ಅಂತಹ ತಿಳುವಳಿಕೆಯಿದ್ದಲ್ಲಿ ಸಮರಸ ಸುದ್ದಿಯೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.