ವಾರಾಣಸಿ: ವಾರಾಣಸಿ ಮತ್ತು ನವದೆಹಲಿ ನಡುವಿನ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ವಾರಾಣಸಿ: ವಾರಾಣಸಿ ಮತ್ತು ನವದೆಹಲಿ ನಡುವಿನ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ವಾರಾಣಸಿಯಿಂದ ಹೊರಟ ರೈಲು ಪ್ರಯಾಗ್‌ರಾಜ್, ಕಾನ್ಪುರದ ಮೂಲಕ ನವದೆಹಲಿಗೆ ತಲುಪಲಿದೆ. ಹೀಗಾಗಿ ಈ ಎಲ್ಲ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಈ ರೈಲು ಪ್ರಯಾಣಿಕರ ಸಮಯದ ಉಳಿತಾಯ ಮಾಡುವುದಲ್ಲದೆ, ಆಯಾ ಪ್ರದೇಶದ ಸಂಸ್ಕೃತಿ, ಕೈಗಾರಿಕೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೂ ಕಾರಣವಾಗುತ್ತದೆ.
ಡಿ.20ರಿಂದ ರೈಲು ಸಂಚಾರ ಆರಂಭಿಸಲಿದ್ದು, ಬೆಳಿಗ್ಗೆ 6 ಗಂಟೆಗೆ ವಾರಾಣಸಿಯಿಂದ ಮೊದಲ ರೈಲು ಹೊರಡಲಿದೆ. 7.34ಕ್ಕೆ ಪ್ರಯಾಗರಾಜ್, 9.30ಕ್ಕೆ ಕಾನ್ಪುರ ಮತ್ತು ಮಧ್ಯಾಹ್ನ 2.05ಕ್ಕೆ ನವದೆಹಲಿ ತಲುಪಲಿದೆ. ಅಲ್ಲಿಂದ ಮತ್ತೆ 3 ಗಂಟೆಗೆ ಹೊರಟ ರೈಲು, ರಾತ್ರಿ 11.05ಕ್ಕೆ ವಾರಾಣಸಿ ತಲುಪಲಿದೆ.
ಇದೇ ವೇಳೆ ವಾರಾಣಸಿಯಲ್ಲಿ ₹ 19 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.